ಬೆಂಗಳೂರು,ಏ 4 (Daijiworld News/MSP): ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಬಯೋನ್ ಸಂಸ್ಥೆ ಮನೆಯಲ್ಲೇ ಕುಳಿತು 10 ನಿಮಿಷಗಳ ಒಳಗೆ ಪರೀಕ್ಷೆ ಮಾಡಬಹುದಾದ ಕೊರೊನಾ ಟೆಸ್ಟ್ ಕಿಟ್ ನ್ನು ಬಿಡುಗಡೆ ಮಾಡಿದೆ.
ಇದು ಭಾರತದ ಮೊದಲ COVID-19 ಸ್ಕ್ರೀನಿಂಗ್ ಕಿಟ್ ಆಗಿದೆ. ಇದರಿಂದ ಕೊರೊನಾ ಪರೀಕ್ಷೆಗಾಗಿ ಆಸ್ಪತ್ರೆಗಳಿಗೆ ತೆರಳುವ ಸಂಭವ ತಪ್ಪಲಿದೆ. ಇದು 5-10 ನಿಮಿಷಗಳಲ್ಲಿ ಫಲಿತಾಂಶಗಳನ್ನು ನೀಡಬಲ್ಲದು ಎಂದು ಸಂಸ್ಥೆ ಹೇಳಿಕೊಂಡಿದೆ.
ಸಂಸ್ಥೆಯ ಅಧಿಕೃತ ವೆಬ್ಸೈಟ್ (bione.in) ಮೂಲಕ ಈ ಸಾಧನವನ್ನು ಖರೀದಿಸಬಹುದಾಗಿದೆ. ಆರ್ಡರ್ ಮಾಡಿದ 2-3 ದಿನಗಳ ಒಳಗೆ ಈ ಟೆಸ್ಟಿಂಗ್ ಕಿಟ್ ಗ್ರಾಹಕರಿಗೆ ತಲುಪಲಿದೆ. ಇನ್ನೊಂದು ಮಹತ್ವದ ಸಂಗತಿ ಎಂದರೆ ಈ ಕಿಟ್ ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಅನುಮೋದನೆ ನೀಡಿದೆ ಎನ್ನಲಾಗಿದೆ.
ಬೆರಳನ್ನು ಆಲ್ಕೋಹಾಲ್ ಸ್ವ್ಯಾಬ್ ನಿಂದ ಸ್ವಚ್ಚಗೊಳಿಸಕೊಳ್ಳಬೇಕು, ಮತ್ತು ಕಿಟ್ನಲ್ಲಿ ಒದಗಿಸಿದ ಸೂಜಿಯಿಂದ ಚುಚ್ಚಿಕೊಳ್ಳುವುದು. ಕಾರ್ಟ್ರಿಡ್ಜ್ ನಲ್ಲಿ , ರಕ್ತದ ಮಾದರಿಯಿಂದ ಫಲಿತಾಂಶವನ್ನು ನೀಡಲಾಗುತ್ತದೆ ಎನ್ನಲಾಗಿದೆ.
ಕಿಟ್ಗೆ ಜಾಗತಿಕ ಪೂರೈಕೆಗೆ ಅನುಗುಣವಾಗಿ 2,000 ರಿಂದ 3,000 ರೂ.ಗಳವರೆಗೆ ಬೆಲೆ ನಿಗದಿಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. COVID-19 ಸ್ಕ್ರೀನಿಂಗ್ ಟೆಸ್ಟ್ ಕಿಟ್ ಒಂದು IgG & IgM- ಆಧಾರಿತ ಸಾಧನವಾಗಿದೆ