ದಾವಣಗೆರೆ, ಎ.04 (DaijiworldNews/PY) : ಶಾಸಕರಾದ ಹೆಚ್.ಡಿ. ರೇವಣ್ಣ ಅವರ ವಿಳಾಸಕ್ಕೆ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಗಡಿಯಾರ ಕಂಬದ ಬಳಿಯಿರುವ ಪ್ರಧಾನ ಅಂಚೆ ಕಚೇರಿಯಿಂದ ಕ್ಯಾಂಡಲ್ ಬಾಕ್ಸ್ ಅನ್ನು ಪೋಸ್ಟ್ ಮಾಡಿದ್ದಾರೆ.
ಈ ಸಂದರ್ಭ ಮಾತನಾಡಿದ ಯುವಮೋರ್ಚಾ ಅಧ್ಯಕ್ಷ ಶಿವನಗೌಡ ಪಾಟೀಲ್ ಅವರು, ಪ್ರಧಾನಿ ಮೋದಿ ಅವರ ದೀಪದ ಕರೆಗೆ ಬೆಂಬಲಿಸಿದ ರೇವಣ್ಣ ಅವರಿಗರ ನಮ್ಮ ಧನ್ಯವಾದಗಳು. ದೇಶಾದ್ಯಂತ ಲಾಕ್ಡೌನ್ ಇರುವ ಕಾರಣ ಕ್ಯಾಂಡಲ್ ತರಲು ಹೊರಗೆ ಹೋದರೆ ಲಾಠಿ ಚಾರ್ಜ್ ಮಾಡುತ್ತಾರೆ ಎಂದು ಅಸಹಾಯಕತೆ ತೋರಿರುವುದು ನಮಗೆ ತಿಳಿಯಿತು ಎಂದರು.
ಇಲ್ಲಿಯ ಮಣ್ಣಿನ ಕಣ ಕಣದಲ್ಲೂ ದೈವ ಸಾಕ್ಷಾತ್ಕಾರದ ಶಕ್ತಿಯಿದೆ. ಇಂತಹ ಪಾವನ ಮಣ್ಣಿನಲ್ಲಿ ಮನಃಪೂರ್ವಕವಾಗಿ ದೀಪ ಬೆಳಗುವ ಪ್ರಕ್ರಿಯರಯು ನಿಜಕ್ಕೂ ದೈವ ಸಾಕ್ಷಾತ್ಕಾರದ ಸಮಾನವಾಗಿದೆ. ಭಾರತೀಯರೆಲ್ಲರೂ ಸ್ವಾತಂತ್ರ್ಯ ಭಾರತದ ಬಳಿಕ ದೇಶದ ಒಳಿತಿಗಾಗಿ, ದೇಶದ ಜನರ ಪ್ರಾಣ ರಕ್ಷಣೆಯ ಸಲುವಾಗಿ ಪ್ರಧಾನಿ ಮೋದಿ ಅವರ ಕರೆ ಅಗತ್ಯ. ಹಾಗಾಗಿ ಅವರ ಅಸಾಹಯಕತೆಯನ್ನು ಮನಗಂಡು ಹೊಳೆನರಸೀಪುರ ಮನೆಯ ವಿಳಾಸಕ್ಕೆ ಮೇಣದ ಬತ್ತಿ ಪ್ಯಾಕೆಟ್ಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡುತ್ತೇವೆ ಎಂದು ತಿಳಿಸಿದ್ದಾರೆ.
ನಿರ್ಮಲ ಮನಸ್ಸಿನಿಂದ ತಾವು ಕುಟುಂಬ ಸಮೇತರಾಗಿ ದೇಶಕ್ಕೆ ಬಂದಿರುವ ಕೊರೊನಾ ಕಂಟಕವನ್ನು ಹೊಡೆದೋಡಿಸುವ ಸಲುವಾಗಿ ಪ್ರಧಾನಿ ಮೋದಿ ಅವರು ಕರೆ ನೀಡಿದಂತೆ ದೀಪ ಉಜ್ವಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಅಲ್ಲದೇ, ತಮ್ಮ ಪಕ್ಷದ ಯಾವುದಾದರೂ ಶಾಸಕರು ಈ ಅಸಾಹಯಕತೆಯ ಅಳಲನ್ನು ತಮ್ಮ ಮುಂದೆ ಹೇಳಿಕೊಂಡಿದ್ದರೆ ನಮಗೆ ತಿಳಿಸಿ, ಅವರಿಗೂ ನಾವು ಕಳುಹಿಸಿಕೊಡಲು ಸಿದ್ದ ಎಂದು ತಿಳಿಸಿದ್ದಾರೆ.