ನವದೆಹಲಿ, ಏ 04 (Daijiworld News/MSP): ನಿಜಾಮುದ್ದೀನ್ನ ಮರ್ಕಜ್ನಲ್ಲಿರುವ ತಬ್ಲಿಘಿ ಜಮಾತನಲ್ಲಿ ಪಾಲ್ಗೊಂಡಿದ್ದ 1,023 ಜನರಿಗೆ ಸೋಂಕು ಕಾಣಿಸಿಕೊಂಡಿರುವುದು ದೃಢವಾಗುವುದರ ಮೂಲಕ ಮರ್ಕಜ್ ಕರೊನಾ ವೈರಸ್ನ ಹಾಟ್ಸ್ಪಾಟ್ ಎಂಬುದು ಸಾಬೀತಾದಂತಾಗಿದೆ.
ದೇಶದಲ್ಲಿ ಕೋವಿಡ್-19ಕ್ಕೆ ತುತ್ತಾದವರ ಸಂಖ್ಯೆ ಶನಿವಾರ ಸಂಜೆ ವೇಳೆಗೆ 2,902ಕ್ಕೆ ತಲುಪಿದೆ. ಈ ಪೈಕಿ 1023 ತಬ್ಲಿಘಿ ಜಮಾತ್ ಗೆ ಸಂಬಂಧಿಸಿದಂತೆ ಹರಡಿದ ಪ್ರಕರಣಗಳಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ ಮಾರಣಾಂತಿಕ ಕೋವಿಡ್ 19 ವೈರಸ್ ನ 601 ಪ್ರಕರಣಗಳು ಪತ್ತೆಯಾಗಿದ್ದು, ಆರೋಗ್ಯ ಸಚಿವಾಲಯದ ಅಂಕಿಅಂಶದ ಪ್ರಕಾರ, ದೇಶದಲ್ಲಿನ ಒಟ್ಟು ಕೋವಿಡ್ 19 ಸೋಂಕಿನ ಪ್ರಕರಣದಲ್ಲಿ ಸುಮಾರು ಶೇ.30ರಷ್ಟು ನಿಜಾಮುದ್ದೀನ್ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಗೆ ತಗುಲಿದೆ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವೌ ಅಗರ್ವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.