ಮುಂಬೈ, ಎ.04 (DaijiworldNews/PY) : "ಮಹಿಳಾ ವೈದ್ಯಕೀಯ ಸಿಬ್ಬಂದಿ ಜೊತೆ ಅಸಭ್ಯವಾಗಿ ವರ್ತಿಸಿದ ತಬ್ಲಿಗಿ ಜಮಾತ್ ಸದಸ್ಯರು ಯಾವುದೋ ಷಡ್ಯಂತ್ರದಲ್ಲಿ ಶಾಮೀಲಾಗಿದ್ದರು. ಅಂತವರನ್ನು ಗುಂಡಿಕ್ಕಿ ಕೊಲ್ಲಬೇಕು" ಎಂದು ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.
ಅಂತಹ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ಔಚಿತ್ಯವನ್ನೂ ಅವರು ಪ್ರಶ್ನಿಸಿದ್ದಾರೆ.
"ಜನರಲ್ಲಿ ನಂಬಿಕೆ ಭಾವನ ಮೂಡಿಸುವ ನಿಟ್ಟಿನಲ್ಲಿ ಅಂತವರನ್ನು ಥಳಿಸುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಬೇಕು" ಎಂದಿದ್ದಾರೆ.
"ವಿಡಿಯೋ ಸಂದೇಶದಲ್ಲಿ ಪ್ರಧಾನಿ ಮೋದಿ ಅವರು ದೀಪ ಅಥವಾ ಕ್ಯಾಮಡಲ್ ಉರಿಸುವುದರ ವಿಚಾರವಾಗಿ ಮಾತನಾಡುವುದರ ಬದಲು ಪ್ರಸ್ತುತ ಸ್ಥಿತಿಗತಿಯ ಹಾಗೂ ಕೊರೊನಾ ವಿರುದ್ದದ ಹೋರಾಟ ಯಾವ ಕಡೆ ಸಾಗುತ್ತಿದೆ ಎಂಬ ವಿಚಾರದ ಬಗ್ಗೆ ಮಾತನಾಡುತ್ತಿದ್ದರೆ ಜನರಿಗೆ ಸಮಾಧಾನವಾಗುತ್ತಿತ್ತು" ಎಂದು ತಿಳಿಸಿದ್ದಾರೆ.