ನವದೆಹಲಿ, ಏ 05 (Daijiworld News/MSP):' ನೋಟಿನಿಂದಲೂ ಹರಡುತ್ತೆ ಕೊರೊನಾ, ಹಾಲಿನ ಪ್ಯಾಕೆಟ್ ನಿಂದಲೂ ಹರಡುತ್ತೆ ವೈರಾಣು' ಹೀಗೆ ದಿನದಿಂದ ದಿನಕ್ಕೆ ಸುದ್ದಿ ಹರಡುತ್ತಿರುವಾಗ ಎಲ್ಲರೂ ಭಯಭೀತರಾಗಿಯೇ ಸಾಕಷ್ಟು ಮುಂಜಾಗ್ರತೆ ವಹಿಸಿ ತಮ್ಮ ನಿತ್ಯದ ಕೆಲಸದಲ್ಲಿ ತೊಡಗುತ್ತಾರೆ.
ಗುಜರಾತ್ನ ಬ್ಯಾಂಕ್ ಆಫ್ ಬರೋಡಾದ ಶಾಖೆಯೊಂದರ ಸಿಬ್ಬಂದಿಯೊಬ್ಬರು ವಹಿಸಿದ ಮುಂಜಾಗ್ರತಾ ಕ್ರಮ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು ಎಲ್ಲರನ್ನು ಅಚ್ಚರಿಗೀಡು ಮಾಡಿದೆ.
ವೈರಲ್ ಆಗಿರೋ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಕಿಟಕಿಯ ಮೂಲಕ ಚೆಕ್ ಅನ್ನು ಕ್ಯಾಷಿಯರ್ಗೆ ನೀಡುತ್ತಾರೆ, ಈ ವೇಳೆ ಮುಖವಾಡ ಮತ್ತು ಕೈಗವಸುಗಳನ್ನು ಧರಿಸಿದ ಬ್ಯಾಂಕ್ ನ ಸಿಬ್ಬಂದಿ ತನ್ನ ಕೈಯಿಂದ ಅದನ್ನು ತೆಗೆದುಕೊಳ್ಳದೆ , ಚಿಮ್ಮಟ್ಟಿಗೆಯಿಂದ ತೆಗೆದುಕೊಳ್ಳುವುದನ್ನು ನಾವು ವಿಡಿಯೊದಲ್ಲಿ ಕಾಣಬಹುದಾಗಿದೆ. ಇಷ್ಟು ಮಾತ್ರ ಅಲ್ಲ ಚೆಕ್ ಮೇಲೆ ವೈರಾಣು ಇರಬಹುದೆಂಬ ಭಯದಲ್ಲಿ ಇಸ್ತ್ರಿಪೆಟ್ಟಿಗೆ ಇಟ್ಟು ಅದನ್ನು ಚೆಕ್ ಗೊಮ್ಮೆ ಇಸ್ತ್ರಿ ಹಾಕುತ್ತಾರೆ.
ಆನಂದ್ ಮಹೀಂದ್ರಾ ಈ ಕ್ಲಿಪ್ ಅನ್ನು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ಹಂಚಿಕೊಂಡಿದ್ದು, ಅವರು ಇದೇ ವೇಳೆ ಈ ವಿಡಿಯೋವನ್ನು ನನಗೆ ವಾಟ್ಸಫ್ ಮೂಲಕ ಬಂದಿದೆ. ಇದರ ಪರಿಣಾಮದ ಬಗ್ಗೆ ನನಗೆ ತಿಳಿದಿಲ್ಲ, ಆದರೆ ಈ ಐಡಿಯಾಕ್ಕೆ ನಾವೆಲ್ಲ ಮನ್ನಣೆ ನೀಡಬೇಕು ಎಂದು ಬರೆದುಕೊಂಡಿದ್ದಾರೆ.