ಕಾನ್ಪುರ, ಎ.05 (Daijiworld News/MB) : ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್ಡೌನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಗಂಗಾ ನದಿಯ ನೀರು ತಿಳಿಯಾಗುತ್ತಿದ್ದು, ಕಲುಷಿತ ಪ್ರಮಾಣ ಕಡಿಮೆಯಾಗುತ್ತಿದೆ, ಗುಣಮಟ್ಟದಲ್ಲಿ ಶೇ.40ರಿಂದ 50 ರಷ್ಟು ಉತ್ತಮ ಮಟ್ಟಕ್ಕೆ ತಲುಪಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಈ ವಿಚಾರವನ್ನು ಕೆಮಿಕಲ್ ಎಂಜಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ಪಿ.ಕೆ.ಮಿಶ್ರಾ ಅವರು ತಿಳಿಸಿದ್ದಾರೆ.
ಕೊರೊನಾ ಸೋಂಕು ಕಾರಣ ಲಾಕ್ ಡೌನ್ ಆಗಿರುವುದರಿಂದ ಗಂಗಾ ನದಿಗೆ ಕೈಗಾರಿಕೆಗಳಿಂದ ಕಲುಷಿತ ದ್ರಾವಣ ಬರುವುದು ನಿಂತಿದೆ. ಈ ಕಾರಣಕ್ಕಾಗಿ ಗುಣಮಟ್ಟದಲ್ಲಿ ನೀರು 10ದಿನಕ್ಕೆ ಶೇ.50ರಷ್ಟು ಉತ್ತಮಮಟ್ಟಕ್ಕೆ ತಲುಪಿದೆ ಎಂದು ಪ್ರಾಧ್ಯಾಪಕರು ತಿಳಿಸಿದ್ದಾರೆ.