ನವದೆಹಲಿ, ಎ.05 (Daijiworld News/MB) : ದೇಶದಲ್ಲಿ ಕಳೆದ 12 ಗಂಟೆಯಲ್ಲಿ 302 ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಭಾನುವಾರ ಬೆಳಿಗ್ಗೆ 9 ಗಂಟೆಗೆ ಬಿಡುಗಡೆ ಮಾಡಿರುವ ಬುಲೆಟಿನ್ನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,374 ತಲುಪಿದ್ದು, 77 ಮಂದಿ ಮೃತಪಟ್ಟಿದ್ದಾರೆ. 267 ಮಂದಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದೆ.
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ತಲಾ ಒಂದೊಂದು ಹೊಸ ಪ್ರಕರಣಗಳು ದೃಢಪಟ್ಟಿದ್ದು ಮಹಾರಾಷ್ಟ್ರದಲ್ಲಿ 24 ಸಾವು ಸಂಭವಿಸಿದೆ. ಗುಜರಾತ್ನಲ್ಲಿ 10, ತೆಲಂಗಾಣದಲ್ಲಿ 7, ಮಧ್ಯಪ್ರದೇಶ, ದೆಹಲಿಯಲ್ಲಿ ತಲಾ 6 ಮತ್ತು ಪಂಜಾಬ್ನಲ್ಲಿ 5 ಸಾವು ವರದಿಯಾಗಿದೆ.
ಅತಿ ಹೆಚ್ಚು ಕೊರೊನಾ ಪ್ರಕರಣಗಳು ಮಹಾರಾಷ್ಟ್ರದಲ್ಲಿ (490) ದೃಢಪಟ್ಟಿವೆ. ಉಳಿದಂತೆ ತಮಿಳುನಾಡಿನಲ್ಲಿ 485, ದೆಹಲಿಯಲ್ಲಿ 445 ಪ್ರಕರಣಗಳು ದೃಢಪಟ್ಟಿವೆ. ಕೇರಳದಲ್ಲಿ ಈವರೆಗೆ 306 ಪ್ರಕರಣಗಳು ದೃಢಪಟ್ಟಿದ್ದರೆ ತೆಲಂಗಾಣದಲ್ಲಿ 269 ಮತ್ತು ಉತ್ತರ ಪ್ರದೇಶದಲ್ಲಿ 227 ಪ್ರಕರಣಗಳು ದೃಢಪಟ್ಟಿವೆ. ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 144ಕ್ಕೆ ಏರಿಕೆಯಾಗಿದೆ.