ಮಡಿಕೇರಿ, ಎ.05 (Daijiworld News/MB) : ಕೊರೊನಾ ವೈರಸ್ನ ಬಗ್ಗೆ ಭಾರತ ಉತ್ತಮ ರೀತಿಯಲ್ಲಿ ಸಾಧನೆ ಮಾಡುತ್ತಿದೆ ಎಂದು ಅಮೆರಿಕದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಕೊಡಗು ಮೂಲದ ಕಾರ್ಯಪ್ಪ ಎಂಬವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತಾಗಿ ವಿಡಿಯೋ ಸಂದೇಶ ಕಳುಹಿಸಿರುವ ಅಮೆರಿಕದಲ್ಲಿರುವ ಕೊಡಗಿನ ವ್ಯಕ್ತಿ ಜನರು ಸ್ವಲ್ಪ ಕೊರೊನಾ ಮಹಾಮಾರಿ ಮಟ್ಟಹಾಕಲು ಸಹಕರಿಸಬೇಕು ಎಂದು ಹೇಳಿರುವ ಅವರು ಕೊರೊನಾ ದೇಶದ ಆರ್ಥಿಕ ಮಟ್ಟ ಮತ್ತು ಕುಟುಂಬಗಳನ್ನು ನಾಶ ಮಾಡಿದೆ. ಆದರೆ ಅಮೆರಿಕ ಮತ್ತು ಯೂರೋಪ್ ದೇಶಗಳಿಗೆ ಹೋಲಿಸಿದರೆ ಭಾರತ ಉತ್ತಮವಾಗಿದೆ. ಈ ಸಂದರ್ಭದಲ್ಲಿ ಪ್ರಮುಖವಾದ ಕ್ರಮ ಕೈಗೊಳ್ಳುವ ಅಗತ್ಯವಿದೆ. ಆ ಹಿನ್ನಲೆಯಲ್ಲಿ ದೇಶವನ್ನು ಲಾಕ್ಡೌನ್ ಮಾಡಲಾಗಿದೆ. ಈ ಕಾರಣದಿಂದಾಗಿ ಜನರು ಮನೆಯಲ್ಲೇ ಇರಬೇಕು, ಆರೋಗ್ಯವಾಗಿರಿ. ಕೊರೊನಾ ವಿರುದ್ಧದ ಹೋರಾಟಕ್ಕೆ ನಿಮ್ಮೆಲ್ಲರಾ ಸಹಕಾರ ಅಗತ್ಯವಿದೆ ಎಂದಿದ್ದಾರೆ.
ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿ ಮಾಡುವ ಸಂದರ್ಭದಲ್ಲಿ ಆರು ಅಡಿ ಅಂತರವನ್ನು ಕಾಯ್ದುಕೊಳ್ಳಿ. ನೀವು ಮನೆಯಲ್ಲೇ ಇರುವ ಕಾರಣದಿಂದಾಗಿ ಶ್ವಾಶಕೋಶದ ಸಾಮರ್ಥ್ಯ ಹೆಚ್ಚಿಸುವ ವ್ಯಾಯಾಮ ಮಾಡಿ. ಕೆಲವು ದಿನಗಳು ನೀವು ಈ ರೀತಿ ಮಾಡಿದ್ದಲ್ಲೀ ಕೊರೊನಾ ವೈರಸ್ ಹಾವಳಿ ದೇಶದಲ್ಲಿ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.
ಕಾರ್ಯಪ್ಪ ಅವರು ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರ ಪುತ್ರರಾಗಿದ್ದು ಸದ್ಯಕ್ಕೆ ಇವರು ಅಮೆರಿಕದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ.