ಚಂಡೀಗಡ, ಎ.05 (DaijiworldNews/PY) : ಲಾಕ್ಡೌನ್ ಆದ ನಂತರ ದಿನಗೂಲಿಗಾಗಿ ಬಣ್ಣ ಬಳಿಯುವ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ತನ್ನ ಸಂಸಾರ ನಡೆಸಲು ಕಷ್ಟವಾಗಿದ್ದು, ಸಹಾಯ ಮಾಡುವಂತೆ ಮನೆಯ ಮುಂದೆ ಬೋರ್ಡ್ ಹಾಕಿಕೊಂಡ ಘಟನೆ ಚಂಡೀಗಡ -ಪಂಚಕುಲ ರಸ್ತೆಯಲ್ಲಿ ನಡೆದಿದೆ.
ಪಂಚಕುಲದ ಪವನ್ ಕುಮಾರ್ ಎಂಬ ವ್ಯಕ್ತಿ ಇಂಗ್ಲೀಷ್ನಲ್ಲಿ ಹೆಲ್ಪ್ ಅಸ್ ಎಂದು ಬೋರ್ಡ್ ಹಾಕಿದ್ದಾರೆ. ನನ್ನ ಬಳಿ ಹಣವಿಲ್ಲ. ಲಾಕ್ಡೌನ್ನಿಂದಾಗಿ ಮಕ್ಕಳಿಗೆ ಆಹಾರವಿಲ್ಲದೇ ಪರದಾಡುವಂತಾಗಿದ್ದು, ಸರ್ಕಾರ ಸಹಾಯ ಮಾಡಬೇಕು. ಲಾಕ್ಡೌನ್ನಿಂದಾಗಿ ನನಗೆ ಕೆಲಸವಿಲ್ಲದಂತಾಗಿದೆ ಎಂದಿದ್ದಾರೆ.
ದೇಶಾದ್ಯಂತ ಜಾರಿಯಲ್ಲಿರುವಂತೆ ಪಂಚಕುಲದಲ್ಲಿ ಕಳೆದ 10 ದಿನಗಳಿಂದ ಲಾಕ್ಡೌನ್ ಮುಂದುವರೆದಿದ್ದು, ಇದರಿಂದಾಗಿ ಕರ್ಫ್ಯೂ ಮುಂದುವರೆದಿದೆ. ಮನೆಯಿಂದ ಯಾರೂ ಹೊರಗೆ ಬರುತ್ತಿಲ್ಲ. ಹಾಗಾಗಿ ಕೆಲಸ ಕಾರ್ಯಗಳು ಸ್ತಬ್ದವಾಗಿವೆ. ಕೆಲಸವಿಲ್ಲದೇ ಕೂಲಿಕಾರ್ಮಿಕರು ಮನೆಯಲ್ಲಿಯೇ ಕೂರುವಂತಾಗಿದೆ.