ನೋಯ್ಡಾ, ಏ 05 (Daijiworld News/MSP):ದೇಶವು ಕರೋನಾ ವೈರಸ್ನ ವಿರುದ್ದ ಬೃಹತ್ ಹೋರಾಟದಲ್ಲಿ ನಿರತರಾಗಿದ್ದರೆ, ಕೆಲವು ಅಪರಾಧಿಗಳು ಇಂಥಹ ಸಂಕಷ್ಟದ ಸಮಯದಲ್ಲೂ ತಮ್ಮ ಅಪರಾಧದ ಮನೋಭಾವವನ್ನು ತ್ಯಜಿಸುವುದಿಲ್ಲ ಎನ್ನುವುದಕ್ಕೆ ಜ್ವಲಂತ ಉದಾಹರಣೆ ಇಲ್ಲಿದೆ. ನೋಯ್ದಾದ ಸಲಾರ್ಪುರ ಗ್ರಾಮದಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ 19 ವರ್ಷದ ಯುವಕನನ್ನು ಬಂಧಿಸಲಾಗಿದೆ.
ನೋಯ್ಡಾದ ಸಲಾರ್ಪುರದ ಕಬಾಡಿ ಗೋಡೌನ್ನಲ್ಲಿ ಭಾನುವಾರ 8 ವರ್ಷದ ಬಾಲಕಿಯೂ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಬಾಲಕಿಯನ್ನು ನೋಯ್ಡಾದ ಚೈಲ್ಡ್ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಳು. ಈ ಕುರಿತು ನೋಯ್ಡಾದ ಸೆಕ್ಟರ್ 49 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೌತಮ್ ಬುದ್ಧ ನಗರ ಪೊಲೀಸ್ ಉಪ ಆಯುಕ್ತ ಸಂಕಲ್ಪ ಶರ್ಮಾ " ಸಲಾರ್ಪುರದಲ್ಲಿ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪದ ಮೇಲೆ 19 ವರ್ಷದ ಯುವಕನನ್ನು ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದಿದ್ದಾರೆ.