ಉಜ್ಜಯಿನಿ, ಎ.05 (DaijiworldNews/PY) : ಆಸ್ಪತ್ರೆಯ ತುರ್ತು ನಿಗಾ ಘಟಕದ ಕೀಲಿ ಕೈ ಸಿಗದೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 55 ವರ್ಷದ ಮಹಿಳೆಯೋರ್ವಳುಘಟನೆ ಮೃತಪಟ್ಟ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಆದರೆ, ಆಕೆಯ ಸ್ಥಿತಿ ತೀವ್ರ ಚಿಂತಾಜನಕವಾಗಿರುವುದನ್ನುಗಮನಿಸಿದ ವೈದ್ಯರು, ಮಾಧವ್ನಗರ್ದಲ್ಲಿ ಕೊರೊನಾ ರೋಗಿಗಳಿಗಾಗಿ ನಿರ್ಮಿಸಿರುವ ಆಸ್ಪತ್ರಗೆ ದಾಖಲಿಸಲು ತೀರ್ಮಾನಿಸಿದರು.
ಆದರೆ, ಆಕೆಯ ಸ್ಥಿತಿ ಕ್ಷಣಕ್ಷಣಕ್ಕೂ ಚಿಂತಾಜನಕವಾಗುತ್ತಿರುವದನ್ನು ತಿಳಿದ ವೈದ್ಯರು, ಮಾರ್ಗದ ಮಧ್ಯದಲ್ಲೇ ಇರುವ ಆರ್ಡಿ ಗರಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ದಿದ್ದಾರೆ.
ಆದರೆ, ವೈದ್ಯರು ಆರ್ಡಿ ಗರಡಿ ಆಸ್ಪತ್ರೆಯ ತುರ್ತು ನಿಗಾ ಘಟಕದ ಕೀಲಿ ಸಿಗದೇ ಪರದಾಡಿದ್ದಾರೆ. ಅದಲ್ಲದೇ, ಸ್ಥಳದಲ್ಲಿದ್ದ ಐಸಿಯು ಜವಾಬ್ದಾರಿ ಹೊತ್ತ ನರ್ಸ್ ಗಳು ಇರದಿದ್ದರಿಂದ ಬಾಗಿಲನ್ನು ಒಡೆಯಲು ನಿರ್ಧರಿಸಿದ್ದಾರೆ.
ಇನ್ನೇನು ಆಸ್ಪತ್ರೆಯ ಐಸಿಯು ಬಾಗಿಲು ಒಡೆದು ಚಿಕಿತ್ಸೆ ನೀಡಲು ಮುಂದಾಗುವಷ್ಟರಲ್ಲಿ ಮಹಿಳೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಉಜ್ಜಯಿನಿ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಅನುಸೂಯಾ ಗೌಳಿ, ಐಸಿಯುವನ್ನು ಬಂದ್ ಮಾಡಿ ಆಸ್ಪತ್ರೆಯಿಂದ ತೆರಳಿದ್ದ ಸಿಬ್ಬಂದಿಯ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಖಾಸಗಿ ಆಸ್ಪತ್ರೆಗೆ ಆದೇಶ ನೀಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಮಹಿಳೆಗೆ ಸರಿಯಾದ ಸಮಯಕ್ಕೆ ವೆಂಟಿಲೇಟರ್ ಒದಗಿಸದ ಮಾಧವ್ನಗರ್ ಆಸ್ಪತ್ರೆಯ ಇಬ್ಬರು ಹಿರಿಯ ವೈದ್ಯಾಧಿಕಾರಿಗಳಾದ ಡಾ.ಆರ್ಪಿ ಪರ್ಮಾರ್ ಮತ್ತು ಡಾ. ಮಹೇಶ್ ಮಾರ್ಮಟ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಡಾ. ಅನುಸೂಯ ಗೌಳಿ ತಿಳಿಸಿದ್ದಾರೆ.