ಬೆಳಗಾವಿ, ಏ 05 (Daijiworld News/MSP): ಮಹಾಮಾರಿ ಕೊರೊನಾ ಹೆಸರು ಕೇಳಿದ್ರೆ ಬೆಚ್ಚಿಬೀಳುವಂತಿರುವಾಗ ತಬ್ಲಿಘಿಗಳು ಮಾತ್ರ ಮತ್ತೆ ವಿಕೃತವಾಗಿ ಸಂತೋಷಪಟ್ಟಿದ್ದಾರೆ. ಬೆಳಗಾವಿ ಆಸ್ಪತ್ರೆಯಲ್ಲಿ ದೆಹಲಿಯಲ್ಲಿ ನಡೆದ ಜಮಾತ್ ನಲ್ಲಿ ಪಾಲ್ಗೊಂಡು ಮರಳಿ ಬಂದವರು ತಮಗೆಲ್ಲಾ ಕೊರೊನಾ ವೈರಸ್ ಹರಡಿದೆ ಎಂದು ಡ್ಯಾನ್ಸ್ ಮಾಡಿದ್ದಾರೆ.
ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಿಂದ ಆಗಮಿಸಿರುವ ಬೆಳಗಾವಿ ನಿವಾಸಿಗಳನ್ನು ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿ ದೆ ಇರಿಸಲಾಗಿದೆ. ಆದರೆ ಕ್ವಾರಂಟೈನ್ ನಲ್ಲಿರುವ ತಬ್ಲಿಘಿಗಳು ಡ್ಯಾನ್ಸ್ ಮಾಡುತ್ತಾ, ವೈದ್ಯ ಸಿಬ್ಬಂದಿಗೆ ಕಿರುಕುಳ ನೀಡತೊಡಗಿದ್ದಾರೆ. ಕರ್ತವ್ಯದಲ್ಲಿರುವ ನರ್ಸ್ ಗಳ ಮೇಲೆ ಉಗುಳಿ ರಂಪಾಟ ಮಾಡುತ್ತಿದ್ದಾರೆ
ಬೆಳಗಾವಿಯಲ್ಲಿ 24 ತಬ್ಲಿಘಿಗಳಲ್ಲಿ 11 ಜನರು ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.