ನವದೆಹಲಿ, ಎ.05 (Daijiworld News/MB) : ಪ್ರಧಾನಿ ನರೇಂದ್ರ ಮೋದಿ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ವೇದಿಕೆಯೊಂದರಲ್ಲಿ 'ಆವೋ ಫಿರ್ ಸೆ ದಿಯಾ ಜಲಾಯೆ' (ಬನ್ನಿ ಮತ್ತೆ ದೀಪ ಹಚ್ಚೋಣ) ಎಂಬ ಕವನ ವಾಚಿಸಿದ ವಿಡಿಯೋವನ್ನು ಟ್ವೀಟ್ ಮಾಡಿದ್ದು ಬನ್ನಿ ದೀಪ ಹಚ್ಚೋಣ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ವಾಜಪೇಯಿ ಅವರು ತಾವೇ ಬರೆದ ಕವನವನ್ನು ನೂರಾರು ಸಭಿಕರೆದುರು ವಾಚನ ಮಾಡುತ್ತಿರುವ ವಿಡಿಯೋವನ್ನು ಹಾಕಿರುವ ಮೋದಿಯವರು ಬನ್ನಿ ದೀಪ ಹಚ್ಚೋಣ ಎಂದು ಹೇಳುವ ಮೂಲಕ ಇಂದು ರಾತ್ರಿ 9 ಗಂಟೆಗೆ ಎಲ್ಲರೂ ದೀಪ ಹಚ್ಚಬೇಕು ಎಂಬುದನ್ನು ನೆನಪಿಸಿದ್ದಾರೆ.