ಲಖ್ನೋ, ಎ.05 (DaijiworldNews/PY) : ಕೊರೊನಾ ಸೋಂಕಿನ ವಿಚಾರವಾಗಿ ತಮ್ಲಿಘಿ ಜಮಾತ್ ವಿರುದ್ದ ಮಾತನಾಡಿದ ಯುವಕನನ್ನು ಗುಂಡು ಹಾರಿಸಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ಕರೇಲಿ ಪ್ರದೇಶದಲ್ಲಿ ನಡೆದಿದೆ.
ಲಾಕ್ ಡೌನ್ ನಡುವೆಯೂ ಕರೇಲಿ ಪ್ರದೇಶದಲ್ಲಿ ಟೀ ಸ್ಟಾಲ್ ಓಪನ್ ಮಾಡಿದ್ದು, ಕೊರೊನಾ ವಿಚಾರವಾಗಿ ಚರ್ಚೆ ನಡೆದಿದೆ. ಈ ಸಂದರ್ಭ ಲೌತಾನ್ ನಿಶಾದ್ ಎಂಬಾತ ತಬ್ಲಿಘಿ ಜಮಾತ್ ವಿರುದ್ಧ ಮಾತನಾಡಿದ ಕಾರಣ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಆರೋಪಿ ವಿರುದ್ಧ ದೂರು ದಾಖಲಿಸಲಾಗಿದೆ. ಮೃತನ ಕುಟುಂಬಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಲಾಕ್ಡೌನ್ ಇದ್ದರೂ ಟೀ ಸ್ಟಾಲ್ ಓಪನ್ ಮಾಡಿರುವ ವಿಚಾರವಾಗಿ ತನಿಖೆ ನಡೆಸಲಾಗಿದ್ದು, ಅಂಗಡಿ ಮಾಲೀಕನ ವಿರುದ್ದವೂ ಕ್ರಮಕೈಗೊಳ್ಳಲಾಗಿದೆ.
ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮರ್ಕಾಜ್ ನಲ್ಲಿ ತಬ್ಲಿಘಿ ಜಮಾತ್ ಆಯೋಜಿಸಿದ್ದು, ಈ ಸಂದರ್ಭ ಮೃತ ವ್ಯಕ್ತಿ ಕೊರೊನಾ ಸೋಂಕಿತರು ಭಾಗಿಯಾಗಿ ಸೋಂಕು ವ್ಯಾಪಕವಾಗಿ ಹರಡಿದ ವಿಚಾರವಾಗಿ ಮಾತನಾಡಿದ್ದ ಎನ್ನಲಾಗಿದೆ.