ದೆಹಲಿ, ಏ 05 (DaijiworldNews/SM): ಏ.05 ರಂದು ರಾತ್ರಿ 9 ಗಂಟೆಗೆ ದೇಶದೆಲ್ಲೆಡೆ ದೀಪ ಬೆಳಗಿಸಲು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದು, ಇದಕ್ಕೆ ದೇಶದೆಲ್ಲೆಡೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಪ್ರಧಾನಿಯವರಿಂದ ಹಿಡಿದು ಕೇಂದ್ರದ ಅನೇಕ ಗಣ್ಯರು ದೀಪಬೆಳಗಿಸಿ ದೇಶದಲ್ಲಿ ಸಾರಿರುವ ಸಮರಕ್ಕೆ ಸಾಥ್ ನೀಡಿದ್ದಾರೆ. ಹಾಗೂ ಕೊರೊನಾ ನಿಯಂತ್ರಣಕ್ಕೆ ಒಂದಾಗಿ ಹೋರಾಡುವ ಸಂಕಲ್ಪ ಸಾರಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್ ಸೇರಿದಂತೆ ಅನೇಕ ಕೇಂದ್ರದ ಗಣ್ಯರು ಸಾಮಾನ್ಯ ಜನರೂ ದೀಪ ಬೆಳಗಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ದೇಶವಾಸಿಗಳು ಮತ್ತೊಮ್ಮೆ ಸಂಪೂರ್ಣ ಓಗೊಟ್ಟಿದ್ದಾರೆ. ಮೋದಿ ಕರೆಯಂತೆ 9 ನಿಮಿಷಗಳ ಕಾಲ ದೀಪ ಬೆಳಗಿಸಿ ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ್ದಾರೆ.
ದೆಹಲಿಯಿಂದ ಹಿಡಿದು, ಗ್ರಾಮೀಣ ಪ್ರದೇಶದ ತನಕವೂ ಜನರು ಮನೆಯ ದೀಪಗಳನ್ನು ಆರಿಸಿ ಕೈಯಲ್ಲಿ ಕ್ಯಾಂಡಲ್ ಸೇರಿದಂತೆ ಇತರ ದೀಪಗಳನ್ನು ಬೆಳಗಿಸಿ ಹಿಡಿದಿದ್ದಾರೆ. ಒಂಬತ್ತು ನಿಮಿಷ ದೇಶದಲ್ಲಿ ಬಹುತೇಕ ಕಡೆಗಳಲ್ಲಿ ಪ್ರಮುಖ ದೀಪಗಳು ಜನರು ಆರಿಸಿದ್ದಾರೆ. ಹಾಗೂ ಕೈಗಳಲ್ಲಿ ಪ್ರಧಾನಿಗಳು ಕರೆ ನೀಡಿದಂತೆ ದೀಪಗಳನ್ನು ಬೆಳಗಿಸಿದ್ದಾರೆ.