ಲಕ್ನೋ,, ಎ.06 (DaijiworldNews/MSP): ಬಾಲಿವುಡ್ ಚಿತ್ರರಂಗದ ಖ್ಯಾತ ಗಾಯಕಿ ಕನ್ನಿಕಾ ಕಪೂರ್ ಅವರಲ್ಲಿ ಆರನೇ ಬಾರಿ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಎಂದು ದೃಢವಾಗಿದ್ದು ಈ ಹಿನ್ನಲೆಯಲ್ಲಿಆಸ್ಪತ್ರೆಯಿಂದ ಅವರನ್ನು ಕೊನೆಗೂ ಡಿಸ್ಚಾರ್ಜ್ ಮಾಡಲಾಗಿದೆ.
ಬ್ರಿಟನ್ನಿಂದ ಮರಳಿದ್ದ ಕನ್ನಿಕಾ ಕಪೂರ್ಗೆ ಕೊರೊನಾ ವೈರಸ್ ಹರಡಿರುವುದು ಪತ್ತೆಯಾಗಿತ್ತು. ಆದರೆ, ಇದನ್ನು ಮುಚ್ಚಿಟ್ಟಿದ್ದ ಕನ್ನಿಕಾ ರಾಜಕೀಯ ನಾಯಕರ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಆ ನಂತರ ಈ ಪ್ರಕರಣ ಇಡೀ ದೇಶದಲ್ಲಿ ದೊಡ್ಡ ಸುದ್ದಿ ಮಾಡಿತ್ತು.
ನಂತರ ಕನ್ನಿಕಾರನ್ನು ಲಕ್ನೋದ ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಇದೀಗ ಆರನೇ ಪರೀಕ್ಷೆಯಲ್ಲಿ ಅವರಲ್ಲಿ ಕೊರೊನಾ ಸೋಂಕು ಇಲ್ಲದೆ ಇರುವುದು ದೃಢವಾದ ಕಾರಣ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
ಕನ್ನಿಕಾ ವಿರುದ್ದ ಜನ ಜೀವನಕ್ಕೆ ಅಪಾಯಕಾರಿಯಾದಂತಹ ವೈರಾಣು ಹರಡುವಿಕೆಯಲ್ಲಿ ನಿರ್ಲಕ್ಷ್ಯ ಮತ್ತಿತರ ಆರೋಪಗಳ ಆಧಾರದ ಮೇಲೆ ಐಪಿಸಿ ಸೆಕ್ಷನ್ 269, 270 ಮತ್ತು 188 ಅಡಿಯಲ್ಲಿ ಕನಿಕಾ ಕಪೂರ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು.