ಬೆಂಗಳೂರು, ಎ.06 (DaijiworldNews/PY) : ಸಿಎಂ ಬಿಎಸ್ವೈ ಅವರು ಇಂದಿರಾ ಕ್ಯಾಂಟೀನ್ನಲ್ಲಿ ನೀಡುತ್ತಿದ್ದ ತಿಂಡಿ, ಊಟ ನಿಲ್ಲಿಸಿರುವ ವಿಚಾರವಾಗಿ ದೂರವಾಣಿ ಮೂಲಕ ವಿಧಾನಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯವರಿಗೆ ಊಟ, ತಿಂಡಿ ನಿಲ್ಲಿಸಿರುವ ಬಗ್ಗೆ ಪತ್ರ ಬರೆದಿದ್ದರು. ಈ ಹಿನ್ನೆಲೆ ಸಿಎಂ ಬಿಎಸ್ವೈ ಅವರು ದೂರವಾಣಿ ಕರೆ ಮಾಡಿ, ಊಟ ತಿಂಡಿ ಉಚಿತವಾಗಿನೀಡಲಾಗುತ್ತಿತ್ತು, ಆದರೆ, ದುರುಪಯೋಗವಾದ ಕಾರಣ ದರ ನಿಗದಿ ಮಾಡಿರುವುದಾಗಿ ತಿಳಿಸಿದರು.
ಊಟ, ತಿಂಡಿ ದುರುಪಯೋಗವಾಗದಂತೆ ಇಂದಿರಾ ಕ್ಯಾಂಟೀನ್ ಮುಖಾಂತರ ಉಚಿತವಾಗಿ ಬಡವರಿಗೆ ನೀಡಿ, ದುರುಪಯೋಗಕ್ಕೆ ಅವಕಾಶ ಮಾಡಿಕೊಡುವ ಬಿಬಿಎಂಪಿ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಿ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಈ ವಿಚಾರವಾಗಿ ಪರಿಶೀಲನೆ ನಡೆಸುವುದಾಗಿ ಬಿಎಸ್ವೈ ಅವರು ಮಾತುಕತೆ ಸಂದರ್ಭ ಸಿದ್ದರಾಮಯ್ಯ ಅವರಿಗೆ ತಿಳಿಸಿದರು.
ರೈತರು, ಕೃಷಿ ಕೂಲಿ ಕಾರ್ಮಿಕರು, ಜೊತೆಗೆ ಹಲವರು ಕ್ಷೇತ್ರಗಳಲ್ಲಿ ದುಡಿಯುವ ವರ್ಗದವರಿಗೆ ಲಾಕ್ಡೌನ್ನಿಂದ ತೊಂದರೆಯಾಗಿದೆ. ವಿಶೇಷ ಪ್ಯಾಕೇಜ್ ಅವರ ನೆರವಿಗಾಗಿ ಘೋಷಣೆ ಮಾಡಬೇಕು ಎಂದು ಇದೇ ಸಂದರ್ಭ ಸಿದ್ದರಾಮಯ್ಯ ಅವರು ತಿಳಿಸಿದ್ಧಾರೆ.
ಇದಕ್ಕೆ ಸಕಾರಾತ್ಮಕವಾಗಿ ಬಿಎಸ್ವೈ ಸ್ಪಂದಿಸಿದ್ದು, ಪ್ರತಿಪಕ್ಷಗಳ ಸಲಹೆ, ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.