ಗುಜರಾತ್, ಎ.06 (DaijiworldNews/PY) : ಒಎಲ್ಎಕ್ಸ್ನಲ್ಲಿ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆಯ ಜಾಹೀರಾತು ನೀಡಿ ₹30,000 ಕೋಟಿಗೆ ಮಾರಾಟಕ್ಕಿದೆ ಎಂದು ತಿಳಿಸಿದ ವ್ಯಕ್ತಿಯ ವಿರುದ್ದ ಪೊಲೀಸರಿಗೆ ಸ್ಥಳೀಯ ಸರ್ಕಾರಿ ಅಧಿಕಾರಿಗಳು ದೂರು ನೀಡಿದ್ದಾರೆ.
ಈ ವಿಚಾರವಾಗಿ ಜಿಲ್ಲಾಧಿಕಾರಿ ನೀಲೇಶ್ ದುಬೆ ಕೆವಾಡಿಯಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ. ಈ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ನೀಲೇಶ್ ದುಬೆ ಅವರು, ಯಾವುದೇ ಪರಿಶೀಲನೆ ನಡೆಸದೆ ಒಎಲ್ಎಕ್ಸ್ನಲ್ಲಿ ಇಂತಹ ಜಾಹೀರಾತು ಪ್ರಕಟಿಸುವುದು ಸರಿಯಾದ ಕ್ರಮವಲ್ಲ. ಆದ್ದರಿಂದ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.