ನವದೆಹಲಿ,ಏ 06 (DaijiworldNews/MSP): ದೇಶದ ಎಲ್ಲಾ ಕೇಂದ್ರ ಸಚಿವರು ಹಾಗೂ ಸಂಸದರ ಸಂಬಳವನ್ನು ಒಂದು ವರ್ಷಗಳ ಕಾಲ ಶೇ.30ರಷ್ಟು ಕಡಿತಗೊಳಿಸಿ ಭಾರತದ ಸಮುಚ್ಚಯ ನಿಧಿಗಾಗಿ ನೀಡಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಸಂಸತ್ತಿನ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿಯನ್ನು 1954 ರ ತಿದ್ದುಪಡಿಯಂತೆ, ಅವರ ವೇತನ, ಭತ್ಯೆ ಮತ್ತು ಪಿಂಚಣಿಯನ್ನು ಶೇಕಡಾ 30 ರಷ್ಟು ಕಡಿಮೆ ಮಾಡುವ ಸುಗ್ರೀವಾಜ್ಞೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ, ಇದು ಏಪ್ರಿಲ್ 1 ರಿಂದ ಒಂದು ವರ್ಷದವರೆಗೆ ಜಾರಿಗೆ ಬರಲಿದೆ ಎಂದು ಕ್ಯಾಬಿನೆಟ್ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
"ನಮ್ಮ ನಾಗರಿಕರ ಬಗೆಗಿನ ನಮ್ಮ ಸಾಮಾಜಿಕ ಜವಾಬ್ದಾರಿಗಳ ಭಾಗವಾಗಿ, ಪ್ರಧಾನಿ, ಕೇಂದ್ರ ಕ್ಯಾಬಿನೆಟ್ ಮಂತ್ರಿಗಳು ಮತ್ತು ಪ್ರತಿ ಸಂಸದರು ತಮ್ಮ ವೇತನವನ್ನು ಒಂದು ವರ್ಷಕ್ಕೆ ಶೇಕಡಾ 30 ರಷ್ಟು ಕಡಿತಗೊಳಿಸಲು ಒಪ್ಪಿಕೊಂಡಿದ್ದಾರೆ. ರಾಷ್ಟ್ರಪತಿ, ಉಪ ರಾಷ್ಟ್ರವತಿಯಿಂದಲೂ ದೇಣಿಗೆ ಸಂಗ್ರಹಿಸಲಾಗುತ್ತದೆ. ವೇತನ ಕಡಿತ ಮಾಡಲು ಸಂಪುಟ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಒಟ್ಟಾರೆ 7,900 ಕೋಟಿ ರೂಪಾಯಿ ಸಂಗ್ರಹ ಆಗಲಿದೆ. ಇದನ್ನು ಭಾರತದ ಸಮುಚ್ಚಯ ನಿಧಿಗಾಗಿ ನೀಡಲಾಗುತ್ತದೆ ಎಂಬುದಾಗಿ ಮಾಹಿತಿ ನೀಡಿದ್ರು
ಇನ್ನೂ ಎರಡು ವರ್ಷಗಳ ಕಾಲ ಸಂಸದರ ನಿಧಿಗೆ ಹಣ ಇರುವುದಿಲ್ಲ. ಈ ನಿಧಿಯನ್ನು ಹಣವನ್ನು ಭಾರತದ ಸಮುಚ್ಚಯ ನಿಧಿಗಾಗಿ ಬಳಕೆ ಮಾಡಲಾಗುತ್ತಿದೆ. ಇದರೊಂದಿಗೆ ಮಾಜಿ ಸಂಸದರು, ಹಾಲಿ ಸಂಸದರ ಸಂಬಳವನ್ನು ಕಡಿತ ಮಾಡಲಾಗುತ್ತಿದೆ ಎಂಬುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.