ನವದೆಹಲಿ, ಎ.07 (Daijiworld News/MB) : ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲ್ಲೇ ಇದ್ದು ಕಳೆದ 24 ಗಂಟೆಗಳಲ್ಲಿ 354 ಜನರಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.
ಮಂಗಳವಾರ ಬೆಳಿಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ. ಇದೀಗ ಸೋಂಕಿತರ ಸಂಖ್ಯೆ 4,421ಕ್ಕೆ ಏರಿಕೆಯಾಗಿದೆ.
ಸೋಂಕಿತರ ಪೈಕಿ 325 ಮಂದಿ ಗುಣಮುಖರಾಗಿದ್ದು, 114 ಜನ ಮೃತಪಟ್ಟಿದ್ದಾರೆ.
ಕರ್ನಾಟಕದಲ್ಲಿ 151 ಮಂದಿಗೆ ಸೋಂಕು ತಗಲಿದ್ದು ಆ ಪೈಕಿ 12 ಮಂದಿ ಗುಣಮುಖರಾಗಿದ್ದಾರೆ. ನಾಲ್ಕು ಜನರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದ್ದು 748 ಜನರಲ್ಲಿ ಸೋಂಕು ತಗುಲಿದೆ. 45 ಜನರು ಮೃತಪಟ್ಟಿದ್ದು 56 ಮಂದಿ ಗುಣಮುಖರಾಗಿದ್ದಾರೆ.
ತಮಿಳುನಾಡಿನಲ್ಲಿ 621, ಕೇರಳದಲ್ಲಿ 327, ದೆಹಲಿಯಲ್ಲಿ 523, ಜಮ್ಮು ಕಾಶ್ಮೀರದಲ್ಲಿ 109, ಮಧ್ಯಪ್ರದೇಶದಲ್ಲಿ 165, ರಾಜಸ್ಥಾನದಲ್ಲಿ 288, ಅಂಡಮಾನ್–ನಿಕೋಬಾರ್ನಲ್ಲಿ 10, ಆಂಧ್ರ ಪ್ರದೇಶದಲ್ಲಿ 266, ಉತ್ತರ ಪ್ರದೇಶದಲ್ಲಿ 305, ತೆಲಂಗಾಣದಲ್ಲಿ 321, ಗುಜರಾತ್ನಲ್ಲಿ 144, ಪಶ್ಚಿಮ ಬಂಗಾಳದಲ್ಲಿ 9, ಪಂಜಾಬ್ನಲ್ಲಿ 76, ಹರಿಯಾಣ 90, ಬಿಹಾರ 32, ಚಂಡೀಗಡ 18, ಅಸ್ಸಾಂ 26, ಲಡಾಖ್ 14, ಛತ್ತೀಸಗಡ 10, ಉತ್ತರಾಖಂಡ 31, ಗೋವಾ 7, ಒಡಿಶಾ 21, ಪುದುಚೇರಿ 5, ಹಿಮಾಚಲಪ್ರದೇಶ 13, ಮಣಿಪುರ 2, ಮಿಜೋರಾಂ 1, ಜಾರ್ಖಂಡ್ 4, ಅರುಣಾಚಲ ಪ್ರದೇಶದಲ್ಲಿ 1 ಪ್ರಕರಣಗಳು ವರದಿಯಾಗಿದೆ.