ನವದೆಹಲಿ, ಎ.07 (Daijiworld News/MB) : ಕೊರೊನಾ ವೈರಸ್ ನಿಯಂತ್ರಿಸಲು ದೆಹಲಿ ಸರ್ಕಾರವು ಐದು ಪ್ರಮುಖ ಕ್ರಮಗಳನ್ನು ಜಾರಿಗೆ ತರುತ್ತಿರುವುದಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಈ ಕುರಿತಾಗಿ ಮಾಹಿತಿ ನೀಡಿದ ಅವರು ಸರ್ಕಾರದ ಕ್ರಮಗಳನ್ನು 5 ಟಿ ಗಳ ಯೋಜನೆ (5 Ts plan –Testing, Tracing, Treatment, Teamwork, Tracking) ಎಂದು ತಿಳಿಸಿದ್ದು ಪರೀಕ್ಷೆ ಮಾಡುವುದು, ರೋಗ ಪತ್ತೆಹಚ್ಚುವುದು, ಚಿಕಿತ್ಸೆ ನೀಡುವುದು, ತಂಡವಾಗಿ ಕೆಲಸ ಮಾಡುವುದು, ನಿಗಾ ವಹಿಸುವುದೇ 5 ಟಿ ಸೂತ್ರ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಈ ಯೋಜನೆಯನ್ನು ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಕಾರ್ಯ ರೂಪಕ್ಕೆ ತರುತ್ತಿದ್ದೇವೆ ಎಂದು ಅವರು ಹೇಳಿದ್ದು ದೆಹಲಿಗೆ 27000 ಪಿಪಿಇ ಕಿಟ್ ಒದಗಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದೂ ಅರವಿಂದ ಕೇಜ್ರಿವಾಲ್ ತಿಳಿಸಿದರು.