ನವದೆಹಲಿ, ಏ 07(Daijiworld News/MSP): ದೇಶದಲ್ಲಿ ಮಾರಕವಾಗಿ ಹರಡುತ್ತಿರುವ ಕೊರೋನ ವೈರಸ್ ನಿಯಂತಿಸಲು ಜಾರಿಗೊಳಿಸಲಾದ ಲಾಕ್ ಡೌನ್ ನ್ನು ಮತ್ತೆ ವಿಸ್ತರಿಸಲು ದೇಶದ ಅನೇಕ ರಾಜ್ಯ ಸರ್ಕಾರಗಳು ಮತ್ತು ತಜ್ಞರುಗಳು ಕೇಂದ್ರವನ್ನು ಒತ್ತಾಯಿಸಿದ್ದು, ಕೇಂದ್ರ ಸರ್ಕಾರವೂ ಈಗ ಅದೇ ದಿಕ್ಕಿನಲ್ಲಿ ಯೋಚಿಸುತ್ತಿದೆ ಎಂದು ತಿಳಿದುಬಂದಿದೆ.
ರಾಜ್ಯ ಸರ್ಕಾರಗಳು ಹಾಗೂ ತಜ್ಞರುಗಳು, ಈಗಾಗಲೇ ಘೋಷಿಸಿರುವ ಲಾಕ್ ಡೌನ್ ನನ್ನು ಮತ್ತೆ ಒಂದಷ್ಟು ವಾರಗಳ ಕಾಲ ಲಾಕ್ ಡೌನ್ ವಿಸ್ತರಿಸುವ ಬಗ್ಗೆ ವಿನಂತಿಸಿರುವ ಹಿನ್ನಲೆಯಲ್ಲಿ" ಕೇಂದ್ರ ಸರ್ಕಾರವು ಅದೇ ದಿಕ್ಕಿನಲ್ಲಿ ಯೋಚಿಸುತ್ತಿದೆ "ಎಂದು ಮೂಲಗಳು ತಿಳಿಸಿವೆ.
ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸುವ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 24 ರಂದು 21 ದಿನಗಳ ರಾಷ್ಟ್ರವ್ಯಾಪಿ ಲಾಕ್ ಡೌನ್ ಘೋಷಿಸಿದ್ದರು.
ಲಾಕ್ ಡೌನ್ ಘೋಷಣೆಯ ಬಳಿಕವೂ ಭಾರತದ COVID-19 ಸಕಾರಾತ್ಮಕ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾರತದಲ್ಲಿ ಇಂದಿನವರೆಗೆ 4,421 ಕೊರೊನಾ ದೃಢಪಟ್ಟ ಪ್ರಕರಣಗಳಾಗಿವೆ ಎಂದು ಮಂಗಳವಾರ ತಿಳಿಸಿದೆ. 4,421 ಪ್ರಕರಣಗಳಲ್ಲಿ 3,981 ಸಕ್ರಿಯ ಪ್ರಕರಣಗಳಾಗಿದ್ದು, 325 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ತಿಳಿಸಿದೆ.