ಬೆಂಗಳೂರು,ಏ 07(Daijiworld News/MSP): ಕೊರೊನಾಕ್ಕಿಂತ ಹೆಚ್ಚಾಗಿ ರಾಜ್ಯದಲ್ಲಿ ಮದ್ಯವ್ಯಸನಿಗಳೇ ಮದ್ಯ ಸಿಗದೆ ಅತ್ಮಹತ್ಯೆಗೆ ಶರಣಾಗುತ್ತಿದ್ದಾರೆ, ಹೀಗಾಗಿ ವೈನ್ ಶಾಪ್ ಓಪನ್ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂಬುದಾಗಿ ಹುಬ್ಬಳ್ಳಿ ಮೂಲದ ವೈದ್ಯ ಡಾ.ವಿನೋದ್ ಕುಲಕರ್ಣಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ಹೈಕೋರ್ಟ್ ಗೆ ಗರಂ ಆಗಿದೆ.
ತುರ್ತು ಪರಿಸ್ಥಿತಿಯ ಸಮಯದಲ್ಲಿ ಜನರು ತಮ್ಮಆರೋಗ್ಯಗಳ ಬಗೆಗೆ ಕಾಳಜಿ ವಹಿಸಿಕೊಳ್ಳಬೇಕು. ಅಂತಹುದರಲ್ಲಿ ವೈದ್ಯರಾಗಿ ಮದ್ಯಪಾನಿಗಳ ಪರ ಅರ್ಜಿ ಸಲ್ಲಿಸಿದು ಸರಿಯಲ್ಲ ಎಂದು ನ್ಯಾಯಪೀಠ ಅಸಮಾಧಾನ ಹೊರಹಾಕಿದ್ದು ಮಾತ್ರವಲ್ಲದೆ ಹತ್ತು ಸಾವಿರ ದಂಡ ವಿಧಿಸಿದೆ.
ಮುಖ್ಯ ನ್ಯಾ. ಎ.ಎಸ್.ಒಕಾ, ನ್ಯಾ.ಬಿ.ವಿ.ನಾಗರತ್ನ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವೈದ್ಯರ ಅರ್ಜಿಯನ್ನು ವಜಾ ಮಾಡಿ ವೈದ್ಯರಿಗೆ 10 ಸಾವಿರ ರೂ ದಂಡ ವಿಧಿಸಿದೆ.
ಲಾಕ್ಡೌನ್ ಹೇರಲಾಗಿರುವ ಸಮಯದಲ್ಲಿ , ಕರ್ನಾಟಕದಲ್ಲಿ ಮದ್ಯ ಮಾರಾಟ ನಿಷೇಧವನ್ನು ತೆರವು ಮಾಡಬೇಕೆಂದು ಪಿಐಎಲ್ ಮೂಲಕ ಮನವಿ ಸಲ್ಲಿಸಿದ್ದರು.