ನವದೆಹಲಿ, ಏ 08 (Daijiworld News/MSP): ಮಾರಕ ರೋಗ ಕೊರೊನಾದ ಚಿಕಿತ್ಸೆಗಾಗಿ, ಪರಿಕ್ಷೆಗಳಿಗಾಗಿ ದೇಶದ ಯಾವುದೇ ಆಸ್ಪತ್ರೆಯಲ್ಲಿ ಹಣಪಡಬಾರದು ಎಂಬುದಾಗಿ ಕೇಂದ್ರ ಆರೋಗ್ಯ ಇಲಾಖೆಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಬುಧವಾರ ಕೊರೊನಾ ಸಂಬಂದಪಟ್ಟಂತೆ ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ ಕುರಿತಂತೆ ವಿಶೇಷ ಕಾಳಜಿ ವಹಿಸಿ ಮಧ್ಯಪ್ರವೇಶಿಸಿದ ಸರ್ವೋಚ್ಚ ನ್ಯಾಯಲಯದ ನ್ಯಾಯಪೀಠ, ಕೊರೊನಾ ಸೋಂಕಿತರನ್ನು ಉಚಿತವಾಗಿ ತಪಾಸಣೆಗೆ ಒಳಪಡಿಸಬೇಕು. ಸೋಂಕಿತರ ಪರೀಕ್ಷೆಗೆ ಆಸ್ಪತ್ರೆಗಳು, ಶುಲ್ಕ ವಿಧಿಸಬಾರದು. ಕೊವಿಡ್-19 ಪರೀಕ್ಷೆಗೆ ಹಣ ಪಡೆಯಬೇಡಿ ಎಂಬುದಾಗಿ ಸೂಚಿಸಿತು.
ಈ ಕುರಿತಂತೆ ದೇಶದ ಎಲ್ಲಾ ಆಸ್ಪತ್ರೆಗಳಿಗೂ ಸೂಚಿಸಿದ ಸುಪ್ರೀಂ ಕೋರ್ಟ್, ಕೊರೊನಾ ವಾರಿಯರ್ಸ್ ಗೆ ರಕ್ಷಣೆ ನೀಡಿ, ವೈದ್ಯರು, ಸಿಬ್ಬಂದಿಗಳ ಬಗ್ಗೆ ಆರೋಗ್ಯ ಕಾಳಜಿ ವಹಿಸುವಂತೆ ಕೇಂದ್ರ ಆರೋಗ್ಯ ಇಲಾಖೆಗೆ ಸೂಚನೆಯನ್ನು ನೀಡಿತು. ಈ ಮೂಲಕ ಕೊರೊನಾ ಟೆಸ್ಟ್, ಚಿಕಿತ್ಸೆಗೆ ದೇಶದ ಯಾವುದೇ ಆಸ್ಪತ್ರೆಗಳಲ್ಲಿ ಹಣ ಪಡೆಯುವಂತಿಲ್ಲ ಎಂಬುದಾಗಿ ಖಡಕ್ ಸೂಚನೆ ನೀಡಿದೆ.