ಬೆಂಗಳೂರು, ಎ.09 (Daijiworld News/MB) : ಕರ್ನಾಟಕದಲ್ಲಿ ಕೊರೊನಾ ಸೋಂಕು 'ತ್ರೀ ಟಿ' ಕಾರ್ಯತಂತ್ರ ವೈದ್ಯರ ಪರಿಶ್ರಮದಿಂದಾಗಿ ಕಡಿಮೆ ಪ್ರಮಾಣದಲ್ಲಿದೆ. ಕರ್ನಾಟಕ ರಾಜ್ಯ ರಾಷ್ಟ್ರದಲ್ಲಿಯೇ 13 ನೇ ಸ್ಥಾನದಲ್ಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, "ಇದು ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್ಮೆಂಟ್ (ಪತ್ತೆಹಚ್ಚುವಿಕೆ, ಪರೀಕ್ಷೆ ಮತ್ತು ಚಿಕಿತ್ಸೆ) ಮೂರು ವಿಧಾನಗಳನ್ನು ಅನುಸರಿಸುತ್ತಿರುವ ಸಾವಿರಾರು ಮಂದಿ ವೈದ್ಯರ ಕಠಿಣ ಪರಿಶ್ರಮ ಮತ್ತು ನಿಖರವಾದ ಯೋಜನೆಯಿಂದ ಸಾಧ್ಯವಾಗುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಇದು ಸಹಾಯ ಮಾಡುತ್ತಿದೆ. ಇದು ದೇಶದಲ್ಲಿಯೇ ಕರ್ನಾಟಕ 13ನೇ ಸ್ಥಾನದಲ್ಲಿರಲು ಸಾಧ್ಯವಾಗಿಸಿದೆ ಎಂದು ತಿಳಿಸಿದ್ದಾರೆ.