ನವದೆಹಲಿ, ಎ.09 (DaijiworldNews/PY) : ಕೇಂದ್ರ ಸರ್ಕಾರವು ಕೊರೊನಾ ವಿರುದ್ದದ ತುರ್ತು ಸ್ಪಂದನೆ ಹಾಗೂ ಆರೋಗ್ಯ ವ್ಯವಸ್ಥೆ ಬಲವರ್ಧನೆ ಹಾಗೂ ಸಿದ್ದತೆಯ ಉದ್ದೇಶದ ಪ್ಯಾಕೇಜ್ಗೆ ಗುರುವಾರ ಒಪ್ಪಿಗೆ ಸೂಚಿಸಿದೆ.
ಈ ಪ್ಯಾಕೇಜ್ಗೆ ರಾಷ್ಟ್ರೀಯ ಆರೋಗ್ಯದ ಅಡಿಯಲ್ಲಿ ಅನುಮೋದನೆ ನೀಡಲಾಗಿದೆ. ಅಡಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ಯಾಕೇಜ್ನ ಅಡಿಯಲ್ಲಿ ಮೂರು ಹಂತಗಳಲ್ಲಿ ಅನುದಾನ ನೀಡಲಿದೆ.
ಈ ಪ್ಯಾಕೇಜ್ ಮುಖಾಂತರ ಜ.2020ರಿಂದ - ಮಾ.2024ರವರೆಗೆ ಮೂರು ಹಂತದಲ್ಲಿ ಹಣಕಾಸಿನ ನೆರವು ನೀಡಲಾಗುತ್ತದೆ. (ಹಂತ–1: 2020ರ ಜನವರಿಯಿಂದ 2020ರ ಜೂನ್, ಹಂತ–2: 2020ರ ಜುಲೈನಿಂದ 2021ರ ಮಾರ್ಚ್, ಹಂತ–3: 2021ರ ಏಪ್ರಿಲ್ ನಿಂದ 2024ರ ಮಾರ್ಚ್ ವರೆಗೆ)
ಕೊರೊನಾ ವಿರುದ್ದ ತುರ್ತು ಸ್ಪಂದನೆ, ರಾಷ್ಟ್ರ ಹಾಗೂ ರಾಜ್ಯಗಳ ಆರೋಗ್ಯ ವ್ಯವಸ್ಥೆ ಬಲಪಡಿಸುವುದು, ಅಗತ್ಯ ವೈದ್ಯಕೀಯ ಉಪಕರಣ, ಔಷಧದ ಸಂಗ್ರಹಣೆ, ಪ್ರಯೋಗಾಲಯಗಳ ಸ್ಥಾಪನೆ ಹಾಗೂ ಜೈವಿಕ ಭದ್ರತಾ ಸಿದ್ದತೆ ಸೇರಿದಂತೆ ಕಣ್ಗಾವಲು ಚಟುವಟಿಕೆಗಳನ್ನು ಬಲಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.