ದೆಹಲಿ, ಏ 09 (DaijiworldNews/SM): ದೇಶದ ಮೂಲೆ ಮೂಲೆಗಳಲ್ಲಿ ಇಂದು ಕೊರೊನಾವೆಂಬ ಏಕೈಕ ಮಂತ್ರ ಮಾತ್ರವೇ ಕೇಳಿಬರುತ್ತಿದೆ. ಆದರೆ, ಇದರ ನಿರ್ವಹಣೆ ಅಸಾಧ್ಯವಾಗಿದೆ. ಈ ನಡುವೆ ಇದೀಗ ಕೇಂದ್ರ ಸರಕಾರ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 15 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿದೆ.
ಈ ಕುರಿತಂತೆ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಒಟ್ಟು ಐದು ವರ್ಷಗಳ ಅವಧಿಯ ಈ ಪ್ಯಾಕೇಜ್ನ್ನು ಹಂತ ಹಂತವಾಗಿ ಜಾರಿಗೆ ತರಲು ಕೇಂದ್ರ ಸರಕಾರ ನಿರ್ಧರಿಸಿದೆ. ದೇಶಾದ್ಯಂತ ಏಕ ಕಾಲದಲ್ಲಿ ಈ ಹಣವನ್ನು ಬಳಕೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಶೇಷ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಮೂರು ಹಂತಗಳಲ್ಲಿ ನೀಡಲು ಮುಂದಾಗಿದ್ದು, ಜನವರಿ 2020 ರಿಂದ ಜೂನ್ 2020 ಮೊದಲ ಹಂತದಲ್ಲಿ ಅನುದಾನ ಮಂಜೂರು ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ.