ನವದೆಹಲಿ, ಎ.10 (DaijiworldNews/PY) : ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ದೆಹಲಿ ಪೊಲೀಸರು ಡ್ರೋನ್ ಕ್ಯಾಮರಾ ಬಳಸಿ ಜನರನ್ನು ನಿಯಂತ್ರಿಸಲು ಮುಂದಾಗಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಲಾಕ್ಡೌನ್ ಜಾರಿಯಲ್ಲಿದ್ದರೂ ಜನರು ಮಾತ್ರ ಮನೆಯಿಂದ ಹೊರಗೆ ಬಂದು ಓಡಾಡುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಇದರಿಂದಾಗಿ ಜನರನ್ನು ನಿಯಂತ್ರಿಸಲು ಡ್ರೋನ್ ಕ್ಯಾಮರಾ ಬಳಸಲು ಮುಂದಾಗಿದ್ದಾರೆ. ಎ.9ರಂದು ದೆಹಲಿಯ ಜಾಮಿಯಾ ಮಸೀದಿ ಪ್ರದೇಶದಲ್ಲಿ ಕ್ಯಾಮರಾ ಬಳಸಿ ಪರಿಶೀಲನೆ ನಡೆಸಿದ್ದಾರೆ. ದೆಹಲಿಯಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ತಿಳಿಯಲು ಅತ್ಯಂತ ಎತ್ತರದ ಪ್ರದೇಶದಿಂದ ಕ್ಯಾಮೆರಾ ಸಂಚರಿಸಿ ಪರಿಶೀಲನೆ ನಡೆಸಲು ಅನುಕೂಲ ಮಾಡಿಕೊಡುತ್ತಿದೆ.
ಕೊರೊನಾ ಸೋಂಕು ಪ್ರಕರಣಗಳು ದೆಹಲಿಯಲ್ಲಿ ಅತೀ ಹೆಚ್ಚಾಗುತ್ತಿವೆ. ಇದರಿಂದಾಗಿ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡರೂ ಕೊರೊನಾ ಸೋಂಕು ಹರಡುವುದು ನಿಯಂತ್ರಣಕ್ಕೆ ಬರುತ್ತಿಲ್ಲ ಎನ್ನಲಾಗಿದೆ.