ನವದೆಹಲಿ, ಎ.10 (DaijiworldNews/PY) : ಜಗತ್ತಿನಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಮತ್ತಷ್ಟು ಹೆಚ್ಚಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಕಳೆದ ಏಳು ವರ್ಷಗಳಲ್ಲೇ ಅತ್ಯಂತ ಎತ್ತರಕ್ಕೆ ಜಿಗಿದಿದೆ.
ಕೊರೊನಾ ವೈರಸ್ ಹರಡುವುಕೆಯಿಂದ ವಿಶ್ವದ ಆರ್ಥಿಕತೆಯು ಅತ್ಯಂತ ಸಂಕಷ್ಟಕ್ಕೆ ಸಿಲಿಕಿದ್ದು, ಆರ್ಥಿಕ ಹಿಂಜರಿತವನ್ನು ಪ್ರವೇಶಿಸಿದೆ. ಹಾಗಾಗಿ ಸುರಕ್ಷಿತ ಹೂಡಿಕೆಯಾದ ಚಿನ್ನದ ಮೇಲೆ ಹೂಡಿಕೆದಾರರು ಒಲವು ತೋರುತ್ತಿದ್ದಾರೆ.
ಯುಎಸ್ ಫೆಡರಲ್ ರಿಸರ್ವ್ ಬ್ಯಾಂಕ್ ಅಮೆರಿಕದಲ್ಲಿ ಎದುರಾಗಿರುವ ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ವ್ಯಾಪಕ ತೀರ್ಮಾನಗಳನ್ನು ತೆಗೆದುಕೊಂಡಿದೆ. ಹೀಗಾಗಿ, ಕಳೆದ ಏಳು ವರ್ಷಗಳ ಗರಿಷ್ಠ ಮಟ್ಟವನ್ನು ಚಿನ್ನವು ತಲುಪಿದೆ.
ಹೆಚ್ಚುವರಿ ಸಹಾಯವಾಗಿ ಯುಎಸ್ ಫೆಡರಲ್ 2.3 ಟ್ರಿಲಿಯನ್ ಡಾಲರ್ ಅನ್ನು ಗುರುವಾರ ಘೋಷಿಸಿದೆ. ಅಮೆರಿಕದಲ್ಲಿ ಕೊರೊನಾ ಲಾಕ್ಡೌನ್ನಿಂದಾಗಿ ದಿನದಿಂದ ದಿನಕ್ಕೆ ನಿರುದ್ಯೋಗ ಹೆಚ್ಚುತ್ತಿದ್ದು, ಸತತ ಮೂರನೇ ವಾರವು ನಿರುದ್ಯೋಗ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ. ಹಾಗಾಗಿ ಷೇರುಪೇಟೆ ಏರಿದರೂ ಆರ್ಥಿಕತೆ ಮತ್ತಷ್ಟು ನಿಧಾನಗೊಳ್ಳುವ ಸಾಧ್ಯತೆ ಇರುವ ಕಾರಣ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಗೆ ಮುಂದಾಗಿದ್ದಾರೆ.
ನ್ಯೂಯಾರ್ಕ್ನ ಕಾಮೆಕ್ಸ್ನಲ್ಲಿ ಚಿನ್ನದ ಬೆಲೆಯು 4.1 ಪರ್ಸೆಂಟ್ ಏರಿಕೆಯಾಗಿ 1,752.80 ಡಾಲರ್ಗೆ ತಲುಪಿದೆ. ಇದು 2012ರ ಅಕ್ಟೋಬರ್ ನಂತರದ ಗರಿಷ್ಟ ಚಿನ್ನದ ದರವಾಗಿದೆ.