ನವದೆಹಲಿ, ಎ.11 (Daijiworld News/MB) : ದೇಶದಾದ್ಯಂತ ಕೊರೊನಾ ತಡೆಗಟ್ಟುವ ಸಲುವಾಗಿ ಲಾಕ್ಡೌನ್ ಜಾರಿ ಮಾಡಿರುವುದು ಆರ್ಥಿಕತೆಗೆ ಮತ್ತಷ್ಟು ಹೊರೆಯಾಗಿ ಪರಿಣಮಿಸಲಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಇದರಿಂದಾಗಿ ಮುಖ್ಯವಾಗಿ ಬಡವರು, ರೈತರು ಮತ್ತು ಕಾರ್ಮಿಕರು ತುಂಬಾ ಸಂಕಷ್ಟ ಅನುಭವಿಸುತ್ತಾರೆ. ಈ ಹಾನಿಯನ್ನೂ ಕೂಡಾ ಸರಿದೂಗಿಸಲು ಸರ್ಕಾರ ಯೋಜನೆಯನ್ನು ರೂಪಿಸ ಬಹುದು ಎಂದು ನಾನು ಭಾವಿಸುತ್ತೇನೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ದೇಶದ ಆರ್ಥಿಕತೆಯು ಬಿಕ್ಕಟ್ಟಿನಲ್ಲಿ ಪರಿಸ್ಥಿತಿಯಲ್ಲಿ ಇದೆ. ಈಗ ಅದು ಮತ್ತಷ್ಟು ಹೆಚ್ಚಾಗುವಂತ ಲಕ್ಷಣಗಳು ಕಂಡು ಬರುತ್ತಿದೆ. ನಾವು ಅದನ್ನು ಎದುರಿಸಲು ಸನ್ನದ್ಧರಾಗಬೇಕು ಕಾಂಗ್ರೆಸ್ನ ಹಿರಿಯ ಮುಖಂಡರ ಸಭೆಯಲ್ಲಿ ಸೋನಿಯಾ ಹೇಳಿದ್ದಾರೆ.
ಬಡ ಕಾರ್ಮಿಕರು ಲಾಕ್ಡೌನ್ ಇರುವುದರಿಂದ ತಮ್ಮ ಗ್ರಾಮಗಳಿಗೆ ವಾಪಾಸ್ ಆಗಿದ್ದಾರೆ. ಅಂತಹವರಿಗೆ ನಮ್ಮ ಕಾರ್ಯಕರ್ತರು ನೆರವಾಗಿದ್ದಾರೆ. ಇಂದೂ ಕೂಡಾ ದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಎಂದು ತಿಳಿಸಿದರು.