ತುಮಕೂರು , ಏ 11 (Daijiworld News/MSP): ಕೊರೊನಾ ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚನೆಗಳು ಇದ್ದರೂ ಇದಕ್ಕೆ ಕ್ಯಾರೆ ಅನ್ನದೇ ತುರುವೇಕೆರೆ ಶಾಸಕ ಮಸಾಲ ಜಯರಾಮ್ ನಿಯಮ ಉಲ್ಲಂಘಿಸಿ ಭರ್ಜರಿಯಾಗೇ ಬರ್ತಡೇ ಆಚರಿಸಿಕೊಂಡಿದ್ದಾರೆ.
ತುರುವೆಕೆರೆಯ ಸಿ.ಎಸ್.ಪುರ ಹೋಬಳಿಯ ಇಡಗೂರು ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ, ತಮ್ಮ ಅಭಿಮಾನಿಗಳಿಗೆ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಸಾಮೂಹಿಕವಾಗಿ ಬಿರಿಯಾನಿ ಊಟ ಸಹ ಹಾಕಿಸಿದ್ದಾರೆ.
ಇನ್ನು ಈ ಭರ್ಜರಿ ಪಾರ್ಟಿ ನಡೆಯುತ್ತಿದ್ದರೂ ಸ್ಥಳದಲ್ಲೇ ಇದ್ದ ಪೊಲೀಸರು ಸುಮ್ಮನಿದ್ದರು. ಸಾರ್ವಜನಿಕರಿಗೊಂದು ಶಾಸಕರಿಗೊಂದು ನಿಯಮವೇ ಇದೀಗ ಎಂದು ನಾಗರಿಕರು ದೂರುತ್ತಿದ್ದಾರೆ.