ಗ್ಯಾಂಗ್ಟೋಕ್, ಎ.11 (Daijiworld News/MB) : ಸಿಕ್ಕಿಂನಲ್ಲಿ ಹಿಮದಿಂದ ಆವೃತ್ತವಾಗಿರುವ ಅತೀ ಎತ್ತರದ ಪ್ರದೇಶದಲ್ಲಿ ಸಂಭವಿಸಿದ ಹಿಮಬಂಡೆ ಕುಸಿತದಿಂದಾಗಿ ಯೋಧ ಸಿಲುಕಿದ್ದು ಪತ್ತೆಹಚ್ಚುವಿಕೆಗಾಗಿ ಭಾರತೀಯ ಸೇನೆ ಭಾರೀ ಪ್ರಮಾಣದ ಶೋಧ ಮತ್ತು ರಕ್ಷಣಾ ಕಾರ್ಯ ನಡೆಸುತ್ತಿದೆ ಎಂದು ವರದಿಯಾಗಿದೆ.
ಕಾರ್ಯಾಚರಣೆಯಲ್ಲಿ ತೊಡಗಿದ್ದ ಯೋಧ ಲ್ಯಾನ್ಸ್ ನಾಯಕ್ ಸಂಜೀವ ರೆಡ್ಡಿ ಹಿಮಪಾತದಲ್ಲಿ ಸಿಲುಕಿದ್ದು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿದೆ ಎಂದು ವರದಿ ಹೇಳಿದೆ.
ಏಪ್ರಿಲ್ 6 ರಂದು ಈ ಘಟನೆ ನಡೆದಿದ್ದು ಯೋಧ ರೆಡ್ಡಿ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕೆಎಸ್ ಪಾಳ್ಯದ ನಿವಾಸಿಯಾಗಿದ್ದಾರೆ. ಸೇನೆಯ ಪ್ರಕಾರ, ಯೋಧ ರೆಡ್ಡಿ ಪತ್ತೆ ಕಾರ್ಯಕ್ಕಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದೆ.
250 ಯೋಧರು, ಹೆಲಿಕಾಪ್ಟರ್ಗಳು, ಶ್ವಾನಪಡೆ, ಹಿಮಪಾತ ರಕ್ಷಣಾ ಶ್ವಾನ ಪಡೆ ಹಾಗೂ ಇನ್ನಿತರ ಉಪಕರಣಗಳೊಂದಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.