ಹುಬ್ಬಳ್ಳಿ, ಎ.11 (DaijiworldNews/PY) : ಕೊರೊನಾ ದೃಢಪಟ್ಟಿದ್ದ ಮುಲ್ಲಾ ಓಣಿಯ ವ್ಯಕ್ತಿಯ ಮಾಹಿತಿ ಸಂಗ್ರಹಿಸಿದ್ದ ಕಮರಿಪೇಟೆ ಪೊಲೀಸ್ ಠಾಣೆಯ ಐವರು ಪೊಲೀಸರನ್ನು ಹೋಂಕ್ವಾರಂಟೈನ್ನಲ್ಲಿ ಇಡಲಾಗಿದೆ.
ಕಮರಿಪೇಟೆ ಠಾಣೆಯ ಎಸ್.ಪಿ ಹಾಗೂ ಚಾಲುಕ್ಯ ವಾಹನದ ಸಿಬ್ಬಂದಿ ಕೊರೊನಾ ಸೋಂಕು ಶಂಕೆ ಹಿನ್ನೆಲೆ ಸೋಂಕಿತನ ಮಾಹಿತಿ ಸಂಗ್ರಹಿಸಲು ತೆರಳಿದಾಗ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು.
ಹಾಗಾಗಿ ಅವರನ್ನು ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ನಲ್ಲಿ ಇಡಲಾಗಿದೆ. ಐವರು ಸಿಬ್ಬಂದಿಗೆ ಆರೋಗ್ಯ ಇಲಾಖೆಯವರು ಸೀಲ್ ಹಾಕಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.