ಬೆಂಗಳೂರು, ಏ 11 (Daijiworld News/MSP): ಕರ್ನಾಟಕದಲ್ಲಿ ಶನಿವಾರ ಮತ್ತೆ ಏಳು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 214ಕ್ಕೇರಿದೆ.
ಇಂದು ಪತ್ತೆಯಾದ ಏಳು ನೂತನ ಪ್ರಕರಣಗಳ ಪೈಕಿ ಐದು ಪ್ರಕರಣ ಮೈಸೂರಿನಲ್ಲೇ ಪತ್ತೆಯಾಗಿದೆ. ಉಳಿದಂತೆ ಬೆಂಗಳೂರು ನಗರದಲ್ಲಿ ಓರ್ವ ಮತ್ತು ಬೀದರ್ ನ ಓರ್ವ ಮಹಿಳೆಗೆ ಸೋಂಕು ಪತ್ತೆಯಾಗಿದೆ.
ಮೈಸೂರಿನಲ್ಲಿ ಐದು ಪ್ರಕರಣಗಳು ದೃಢವಾಗಿದ್ದು, ಇವರೆಲ್ಲರೂ ಫಾರ್ಮ ಕಂಪನಿಯ ಸಿಬ್ಬಂದಿಗಳಾಗಿದ್ದಾರೆ. ಸೋಂಕಿತ ಸಂಖ್ಯೆ 88ರ ಸಂಪರ್ಕಕ್ಕೆ ಬಂದ ಇವರಿಗೆ ಕೊರೊನಾ ನಡೆದಿದೆ. ಸದ್ಯ ಇವರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತ ಸಂಖ್ಯೆ 208 ಬೆಂಗಳೂರಿನ 32 ವರ್ಷದ ಪುರುಷನಾಗಿದ್ದು ಇವರು 196 ಸಂಖ್ಯೆಯ ಸೋಂಕಿತರ ಸಂಪರ್ಕಕ್ಕೆ ಬಂದವರಾಗಿದ್ದಾರೆ. ಸೋಂಕಿತ ಸಂಖ್ಯೆ 211 ಬೀದರ್ ನ 50 ವರ್ಷದ ಮಹಿಳೆಯಾಗಿದ್ದು, ಇವರು ಸೋಂಕಿತ ಸಂಖ್ಯೆ 122ರ ಸಂಪರ್ಕಕ್ಕೆ ಒಳಗಾದವರಾಗಿದ್ದಾರೆ.