ಬೆಂಗಳೂರು, ಎ.11 (DaijiworldNews/PY) : ಕೆಎಸ್ಆರ್ಟಿಸಿ ಸಿದ್ದಪಡಿಸಿದ ಸಂಚಾರಿ ಸ್ಯಾನಿಟೈಸರ್ಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಚಾಲನೆ ನೀಡಿದರು.
20 ಸಾವಿರ ರೂ ವೆಚ್ಚದಲ್ಲಿ ಕೆಎಸ್ಆರ್ಟಿಸಿ ಸ್ಕ್ರಾಪ್ ಬಸ್ ಅನ್ನು ಸಂಚಾರಿ ಸ್ಯಾನಿಟೈಸರ್ ಆಗಿ ಪರಿವರ್ತಿಸಲಾಗಿದೆ.
ಬೆಂಗಳೂರು ನಗರದೆಲ್ಲೆಡೆ ಸಂಚಾರ ಮಾಡಲಿರುವ ಈ ಸಂಚಾರಿ ಸ್ಯಾನಿಟೈಸರ್ ಬಸ್ ಅಗತ್ಯ ಸೇವೆಗಳನ್ನು ಒದಗಿಸುವ ಪೊಲೀಸ್, ವೈದ್ಯಕೀಯ, ಅರೆವೈದ್ಯಕೀಯ, ಪೌರಕಾರ್ಮಿಕರಿಗಾಗಿ ಕಾರ್ಯನಿರ್ವಹಿಸಲಿದೆ.