ಬೆಂಗಳೂರು, ಎ.11 (DaijiworldNews/PY) : ಕೊರೊನಾ ಪರಿಹಾರ ನಿಧಿಗೆ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೆಗೌಡ ಅವರು ತಮ್ಮ ಪಿಂಚಣಿ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ.
ಪಿಎಂ ಕೇರ್ಸ್ ಫಂಡ್, ಮುಖ್ಯಮಂತ್ರಿ ಪರಿಹಾರ ನಿಧಿ ಹಾಗೂ ಕೇರಳ ಸಿಎಂ ಪರಿಹಾರ ನಿಧಿಗೆ ದೇವೇಗೌಡರು ತಲಾ ಒಂದೊಂದು ಲಕ್ಷ ದೇಣಿಗೆ ನೀಡಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ.
ನಾನು ಪಡೆಯುವ ಪಿಂಚಣಿ ಹಣವನ್ನು ಕೊರೊನಾ ನಿಯಂತ್ರಣ ನಿಧಿಗೆ ನೀಡುತ್ತಿದ್ದೇನೆ. ತಲಾ 1 ಲಕ್ಷವನ್ನು ಪಿಎಂ ಕೇರ್ಸ್ ಫಂಡ್, ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ ಹಾಗೂ ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡುತ್ತಿದ್ದೇವೆ ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ದೇವೆಗೌಡರು ಈ ಮೂಲಕ ಕೊರೊನಾ ಪರಿಹಾರ ನಿಧಿಗೆ ಮೂರು ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ. ಇಡೀ ದೇಶವೇ ಮಾರಣಾಂತಿಕ ಕೊರೊನಾ ವೈರಸ್ಗೆ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ. ಹಾಗಾಗಿ ಪಿಎಂ, ಸಿಎಂ ಕೊರೊನಾ ಪರಿಹಾರ ನಿಧಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಕೊರೊನಾ ಪರಿಹಾರ ನಿಧಿಗೆ ಈಗಾಗಲೇ ಅನೇಕರು ದೇಣಿಗೆ ನೀಡಿದ್ದಾರೆ.