ಮಹಾರಾಷ್ಟ್ರ, ಎ.12 (Daijiworld News/MB) : ದೇಶದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣ ದಾಖಲಾಗಿರುವ ಮಹಾರಾಷ್ಟ್ರದ ಮುಂಬೈ ತಾಜ್ ಮಹಲ್ ಹೊಟೇಲ್ನ ಆರು ಮಂದಿ ಸಿಬ್ಬಂದಿಗಳಿಗೆ ಕೊರೊನಾ ದೃಢಪಟ್ಟಿರುವುದಾಗಿ ವರದಿಯಾಗಿದೆ.
ಪ್ರಸ್ತುತ ಆರು ಮಂದಿ ತಾಜ್ ಮಹಲ್ ಪ್ಯಾಲೇಸ್ ಹೊಟೇಲ್ ಸಿಬ್ಬಂದಿಯ ಆರೋಗ್ಯ ಸ್ಥಿರವಾಗಿದ್ದು ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಾ. ಗೌತಮ್ ಬನ್ಸಾಲಿ ತಿಳಿಸಿದ್ದಾರೆ.
ಆದರೆ ತಾಜ್ ಹೊಟೇಲ್ನ ಬೇರೆ ನೌಕರರಿಗೂ ಸೋಂಕು ತಗುಲಿದೆಯೇ ಎಂಬುದು ಇನ್ನಷ್ಟೇ ಖಚಿವಾಗಬೇಕಿದೆ.
6 ಮಂದಿಯಲ್ಲಿ ಪಾಸಿಟಿವ್ ವರದಿ ಬಂದ ತಕ್ಷಣವೇ ಅವರೊಂದಿಗೆ ಸಂಪರ್ಕದಲ್ಲಿದ್ದ ಇತರರನ್ನು ಹೋಮ್ ಕ್ವಾರಂಟೈನ್ನಲ್ಲಿ ಇಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಹಾಗೆಯೇ ದಕ್ಷಿಣ ಮುಂಬೈನಲ್ಲಿರುವ ವಿಶ್ವ ಪ್ರಸಿದ್ದ ತಾಜ್ ಮಹಲ್ ಪ್ಯಾಲೇಸ್ ಮತ್ತು ಟವರ್ ಹೊಟೇಲ್ನಲ್ಲಿ ಲಾಕ್ ಡೌನ್ ಕಾರಣದಿಂದ ಯಾವುದೇ ಪ್ರವಾಸಿಗರು ಇಲ್ಲ, ಕೆಲವೇ ಸಿಬ್ಬಂದಿಗಳು ಮಾತ್ರ ಕೆಲಸಕ್ಕೆ ಹಾಜರಾಗುತ್ತಿದ್ದರು ಎಂದು ಆಡಳಿತ ಮಂಡಳಿ ತಿಳಿಸಿದೆ.
ಮಹಾರಾಷ್ಟ್ರದಲ್ಲಿ 1,700ಕ್ಕಿಂತ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇದರಲ್ಲಿ 1400 ಕ್ಕಿಂತ ಹೆಚ್ಚು ಜನರು ಮುಂಬೈನ ಜನರು ವರದಿಯಾಗಿದೆ.