ಅಮರಾವತಿ, ಎ.12 (Daijiworld News/MB) : ಚಿಕಿತ್ಸೆಗೆ ಸಹಕರಿಸದೇ, ಎಲ್ಲೆಂದರಲ್ಲಿ ಓಡಾಡಿಕೊಂಡಿರುವ ತಬ್ಲಿಗಿಗಳು ಜನರಲ್ಲಿ ಸೋಂಕು ಹರುಡುತ್ತಿದ್ದಾರೆ. ಸೋಂಕು ಹರಡಲು ಶುಚಿತ್ವ ಪಾಲಿಸದ ತಬ್ಲಿಗಿಗಳೇ ಕಾರಣ ಎಂದು ಹೇಳಿದ್ದ ಆಂಧ್ರ ಉಪ ಮುಖ್ಯಮಂತ್ರಿ ಕೆ. ನಾರಾಯಣಸ್ವಾಮಿ ತನ್ನ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖಂಡರು ದೆಹಲಿಗೆ ಭೇಟಿ ನೀಡಿದ ಎಲ್ಲರಿಗೂ ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡುವಾಗ ಬಳಸಿದ ಕೆಲವು ಪದಗಳು ಯಾರಿಗಾದರೂ ನೋವನ್ನುಂಟುಮಾಡಿದ್ದಲ್ಲಿ ಕ್ಷಮೆಯಿರಲಿ. ಈ ಹೇಳಿಕೆಯನ್ನು ಹಿಂದೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ನಾರಾಯಣಸ್ವಾಮಿ ಅವರು ಕೆಲವು ವಿಡಿಯೋಗಳನ್ನು ಆಧಾರಿಸಿ ತಬ್ಲಿಘಿ ಸದಸ್ಯರ ಆಹಾರ ಪದ್ಧತಿಗಳ ಬಗ್ಗೆ ಟೀಕೆಗಳನ್ನು ಮಾಡಿದ್ದು ಹಲವರು ಈ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಆ ವಿಡಿಯೋ ನಕಲಿ ಎಂದು ಸಾಬೀತಾಗಿದೆ.
ನನಗೆ ಮುಸ್ಲಿಂ ಅಲ್ಪಸಂಖ್ಯಾತರ ಮೇಲೆ ಯಾವುದೇ ದ್ವೇಷವಿಲ್ಲ. ಅವರು ಅವರ ದೇವರನ್ನು ಪೂಜಿಸಲಿ. ಅಲ್ಲಾಹು ದಯಾಮಯಿ. ಆದರೆ, ತಬ್ಲಿಗಿಗಳು ಮಾಡುತ್ತಿರುವುದೆಲ್ಲವೂ ಅಸಹ್ಯದ ಕೆಲಸಗಳು. ಅವರು ಉತ್ತಮ ಆಹಾರ ಸೇವಿಸುವುದಿಲ್ಲ. ಶುಚಿತ್ವ ಪಾಲಿಸುವುದಿಲ್ಲ. ಅವರ ಅಭ್ಯಾಸಗಳಿಂದಾಗಿ ಕೊರೊನಾ ವೈರಸ್ ಈ ಹಂತಕ್ಕೆ ಹರಡಿದೆ. ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಸಂಖ್ಯೆ 25–26 ಇರಲಿಲ್ಲ. ಆದರೆ ದೆಹಲಿಯ ಮರ್ಕಜ್ನಿಂದ ಬಂದ ತಬ್ಲಿಗಿಗಳು ರಾಜ್ಯದಲ್ಲಿ ಸೋಂಕನ್ನು ಹರಿಡಿದರು ಎಂದು ನಾರಾಯಣಸ್ವಾಮಿ ಅವರು ಹೇಳಿದ್ದರು.
ಇತ್ತೀಚೆಗಷ್ಟೇ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ಕೊರೊನಾ ಹರಡುವುತ್ತಿರುವುದಕ್ಕೆ ನಿರ್ದಿಷ್ಟ ಧರ್ಮದ ಧಾರ್ಮಿಕ ಸಭೆಯ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ರವಿಶಂಕರ್ ಗುರೂಜಿ, ಜಗ್ಗಿ ವಾಸುದೇವ್ ಅಥವಾ ಮಾತಾ ಅಮೃತಾನಂದಮಾಯಿ ಅವರು ಆಯೋಜಿಸುವ ಯಾವುದೇ ಧಾರ್ಮಿಕ ಸಭೆಯಲ್ಲೂ ಇದು ಸಂಭವಿಸಬಹುದು ಎಂದು ಹೇಳಿದ್ದರು.