ಮುಂಬೈ, ಎ.12 (DaijiworldNews/PY) : ಐಸೋಲೇಷನ್ ವಾರ್ಡ್ ನಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಂಕೋಲಾದಲ್ಲಿ ನಡೆದಿದೆ.
30 ವರ್ಷದ ಸೋಂಕಿತ ಅಸ್ಸಾಂ ರಾಜ್ಯದ ನಾಗಾಂವ್ ಗ್ರಾಮದ ನಿವಾಸಿ. ಮೃತ ಸೋಂಕಿತ ಮಾ.6 ರಿಂದ 8ರವರೆಗೆ ದೆಹಲಿಯ ನಿಜಾಮುದ್ದೀನ್ ಮರ್ಕಜ್ನಲ್ಲಿ ನಡೆದ ಜಮಾತ್ನಲ್ಲಿ ಭಾಗಿಯಾಗಿದ್ದರು. ಬಳಿಕ ಮಹಾರಾಷ್ಟ್ರದ ಅಂಕೋಲಾಗೆ ಕೆಲ ಸದಸ್ಯರೊಂದಿಗೆ ಬಂದಿದ್ದನು. ಈ ತಂಡ ಅಂಕೋಲಾಗೆ ಬರುವ ಮುನ್ನ ಬಲರಾಂಪುರದಲ್ಲಿ ವಾಸ್ತವ್ಯ ಮಾಡಿತ್ತು.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಜಿತೇಂದ್ರ ಪಾಪಲಕರ್, ಎ.7ರಂದು ಈ ಜಮಾತ್ನ ಸದಸ್ಯರು ತಾವೇ ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಎಲ್ಲರ ಆರೋಗ್ಯದಲ್ಲೂ ಬದಲಾವಣೆ ಕಂಡು ಬಂದ ಕಾರಣ ಸದಸ್ಯರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿತ್ತು. ಎ.10ರಂದು ಬಂದ ವರದಿಯಲ್ಲಿ ಓರ್ವನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು ಎಂದು ಹೇಳಿದ್ದಾರೆ.
ಎ.11ರಂದು ಓರ್ವನ ಶವ ವಾರ್ಡ್ ನಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ ಆಸ್ಪತ್ರೆಯಲ್ಲಿದ್ದ ಹರಿತವಾದ ವಸ್ತುವಿನಿಂದ ಕತ್ತು ಕೊಯ್ದುಕೊಂಡಿದ್ದಾನೆ ಎನ್ನಲಾಗುತ್ತಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. 12 ಜನರಿಗೆ ಇದೇ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. 12 ಜನರಿಂದ ಈ ವಿಚಾರದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಜಿಲ್ಲಾದಿಕಾರಿಗಳು ತಿಳಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ಪ್ರಕಾರ, ಮೃತಪಟ್ಟ ವ್ಯಕ್ತಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದನು. ಕಳೆದ 10 ತಿಂಗಳಿನಿಂದ ಕುಟುಂಬಸ್ಥರಿಂದ ದೂರವಿದ್ದ ಕಾರಣ ನೊಂದಿದ್ದರು ಎಂದು ಹೇಳುತ್ತಾರೆ.