ನವದೆಹಲಿ, ಎ.12 (DaijiworldNews/PY) : ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವೇ ದೇಶದಲ್ಲಿ ಹೊಣೆ ಎಂದು ಕಾಂಗ್ರೆಸ್ನ ಹಿರಿಯ ನೇತಾರ ಕಮಲ್ನಾಥ್ ಹೇಳಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧ್ಯಪ್ರದೇಶದ ವಿಧಾನಸಭೆ ಕಾರ್ಯವೆಸಗಲಿ ಹಾಗೂ ಅಲ್ಲಿದ್ದ ಕಾಂಗ್ರೆಸ್ ಸರ್ಕಾರ ಪತನವಾಗಲಿ ಎಂಬ ಏಕೈಕ ಉದ್ದೇಶದಿಂದ ಸಂಸತ್ ಕಲಾಪ ನಡೆದಿತ್ತು ಎಂದು ಹೇಳಿದರು.
ಬಿಜೆಪಿ ಮಧ್ಯಪ್ರದೇಶದ ಜನರನ್ನು ಮೂರ್ಖರನ್ನಾಗಿ ಮಾಡಿದ್ದು, ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದರೂ ಅಲ್ಲಿ ಆರೋಗ್ಯ ಸಚಿವರಾಗಲೀ, ಗೃಹ ಸಚಿವರಾಗಲಿ ಇಲ್ಲ. ಈ ರೀತಿಯಾಗಿ ಜಗತ್ತಿನಲ್ಲಿ ಎಲ್ಲಿಯೂ ಆಗಿರಲಿಕ್ಕಿಲ್ಲ ಎಂದರು.
ಕೊರೊನಾ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ರೋಗದ ಪರೀಕ್ಷೆ ನಡೆಸಬೇಕಿದೆ. ದೇಶದ ಆರ್ಥಿಕ ಕುಸಿತ ಕೊರೊನಾದಿಂದಾಗಿ ಅನುಭವಿಸಲಿದ್ದು, ಕೇಂದ್ರದ ಆರ್ಥಿಕ ಪ್ಯಾಕೇಜ್ಗಳತ್ತ ಹೆಚ್ಚಿನ ಗಮನ ಹರಿಸಬೇಕಿದೆ. ಯಾವ ಕ್ಷೇತ್ರಕ್ಕೆ ಗಮನ ಹರಿಸಲಾಗುತ್ತದೆ ಹಾಗೂ ಅದರ ಅನುಷ್ಠಾನ ಹೇಗೆ ಆಗುತ್ತದೆ ಎನ್ನುವುದರ ಮೇಲೆ ಯಶಸ್ಸು ಅವಲಂಬಿತವಾಗಿದೆ ಎಂದು ತಿಳಿಸಿದರು.