ಬೆಂಗಳೂರು, ಎ.12 (DaijiworldNews/PY) : ರಾಜ್ಯದ ಪಡಿತರ ಅಂಗಡಿಳಲ್ಲಿ ಗೋಧಿ ಹಾಗೂ ಸೀಮೆ ಎಣ್ಣೆ ನೀಡದೇ ಇದ್ದರೂ ಅವುಗಳನ್ನು ನೀಡಲಾಗಿದೆ ಎಂದು ಪಾವತಿ ರಶೀದಿಯಲ್ಲಿ ನಮೂದಿಸಿ ಬಳಕೆದಾರರಿಂದ ಸಹಿ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ವಿಚಾರವಾಗಿ ಮುಖ್ಯಮಂತ್ರಿ ತಕ್ಷಣವೇ ಗಮನಹರಿಸಿ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ನ್ಯಾಯ ಬೆಲೆ ಅಂಗಡಿಗಳಲ್ಲಿ ವಂಚನೆ ಪ್ರಕರಣಗಳ ದೂರುಗಳು ಕೇಳಿಬರುತ್ತಿದ್ದು, ಸರ್ಕಾರ ಕ್ರಮಕ್ಕೆ ಮುಂದಾಗಬೇಕು ಎಂದಿದ್ದಾರೆ.
ಬಡವರಿಗೆ ಲಾಕ್ಡೌನ್ ಸಂದರ್ಭ ತೊಂದರೆಯಾಗಬಾರದು ಎಂದು ಎರಡು ತಿಂಗಳ ಪಡಿತರವನ್ನು ಒಟ್ಟಿಗೆ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೂ ಸೂಚನೆ ನೀಡಲಾಗಿದೆ. ಕೆಲವು ಅಂಗಡಿಗಳಿಗೆ ಸ್ವತಃ ಆಹಾರ ಸಚಿವ.ಕೆ. ಗೋಪಾಲಯ್ಯ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರ್ಲಕ್ಷ್ಯ ತೋರಿದ ಕೆಲವು ಅಂಗಡಿಗಳನ್ನು ಅಮಾನತುಗೊಳಿಸಲಾಗಿದೆ. ಈ ನಡುವೆ ಸಿದ್ದರಾಮಯ್ಯ ಅವರು ಕೂಡಾ ಸರ್ಕಾರದ ಗಮನವನ್ನು ಸೆಳೆದಿದ್ದಾರೆ.