ಚಂಡೀಗಢ, ಎ.12 (DaijiworldNews/PY) : ನಿಹಾಂಗ್ (ಶಸ್ತ್ರಗಳನ್ನು ಹೊಂದಿರುವ) ಸಿಖ್ಖರ ಗುಂಪೊಂದು ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್(ಎಎಸ್ಐ)ನ ಕೈ ಕತ್ತರಿಸಿದ ಆರೋಪಿಗಳನ್ನು ಪತ್ತೆ ಮಾಡಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.
ಪಂಜಾಬ್ ಪಟಿಯಾಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿವೆ. ಜಿಲ್ಲೆಯಲ್ಲಿ ಭಾನುವಾರ ನಿಹಾಂಗ್ ಸಿಖ್ಖರ ಗುಂಪು ಸಹಾಯಕ ಸಬ್ ಇನ್ಸ್ಪೆಕ್ಟರ್ನ ಕೈ ಕತ್ತರಿಸಿದ್ದರು. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿದ್ದವು.
ಈ ಸಂಬಂಧ ಆರೋಪಿಗಳನ್ನು ಪತ್ತರ ಹಚ್ಚಿ ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ತನಿಖೆ ಮುಂದುವರೆದಿದೆ. ರಾಜ್ಯದಲ್ಲಿ ಯಾರೇ ಆಗಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.
ಮಂಡಿ ಬೋರ್ಡ್ ಠಾಣೆ ಪೊಲೀಸರು ಪಟಿಯಾಲದ ತರಕಾರಿ ಮಾರುಕಟ್ಟೆ ಬಳಿ ವಾಹನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕರಿಂದ ಐದು ನಿಹಾಂಗ್ ಸಿಖ್ಖರ ಗುಂಪನ್ನು ತಡೆದಿದ್ದು ಲಾಕ್ಡೌನ್ ಪಾಸ್ ತೋರಿಸುವಂತೆ ಗುಂಪಿಗೆ ಪೊಲೀಸರು ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಈ ಗುಂಪು ತಪ್ಪಿಸಲು ಯತ್ನಿಸಿದ್ದು ಪೊಲೀಸರತ್ತ ವಾಹನ ನುಗ್ಗಿಸಲೂ ಯತ್ನಿಸಿದೆ. ನಂತರ ಪೊಲೀಸರ ಮೇಲೆ ದಾಳಿ ನಡೆಸಿದೆ ಎಂದು ಪಟಿಯಾಲ ಜಿಲ್ಲಾ ಎಸ್ಪಿ ಮಂದೀಪ್ ಸಿಂಗ್ ಸಿದು ತಿಳಿಸಿದ್ಧರು.