ನವದೆಹಲಿ, ಎ.13 (Daijiworld News/MB) : 81 ಕೋಟಿಗೂ ಅಧಿಕ ಫಲಾನುಭಗಳಿಗೆ ನಾಗರಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಸುಮಾರು ಒಂಭತ್ತು ತಿಂಗಳ ಕಾಲ ವಿತರಣೆ ಮಾಡುವಷ್ಟು ಅಕ್ಕಿ, ಗೋಧಿ, ದಾಸ್ತಾನು ನಮ್ಮಲ್ಲಿ ಇದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಈ ಕುರಿತಾಗಿ ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿರುವ ಅವರು, ಈ ಬಾರಿಗೋಧಿ ಬೆಳೆ ಬಂಪರ್ ಇಳುವರಿ ಬಂದಿದ್ದು ಸರ್ಕಾರದ ಗೋದಾಮಿನಲ್ಲಿ ಸಾಕಷ್ಟು ಗೋಧಿ ಸಂಗ್ರಹ ಮಾಡಲಾಗಿದೆ. ಪ್ರಸ್ತುತ ಸರ್ಕಾರಿ ಗೋದಾಮುಗಳಲ್ಲಿ 299.45 ಲಕ್ಷ ಮೆಟ್ರಿಕ್ ಟನ್ ಅಕ್ಕಿ, 235.33 ಲಕ್ಷ ಮೆಟ್ರಿಕ್ ಟನ್ ಗೋಧಿ ಸೇರಿಒಟ್ಟು 534.78 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳ ದಾಸ್ತಾನು ಇದೆ. ಹೀಗಾಗಿ ನಾಗರಿಕರಿಗೆ ಪ್ರಮುಖ ಆಹಾರ ಧಾನ್ಯಗಳ ಯಾವುದೇ ಕೊರತೆ ಉಂಟಾಗುವುದಿಲ್ಲ ಎಂದು ಅವರು ಭರವಸೆ ನೀಡಿದ್ದಾರೆ.
ಹಿಂದಿಗಿಂತ ನಮ್ಮ ಆಹಾರ ಧಾನ್ಯಗಳ ಸರಬರಾಜು ಮತ್ತು ವಿತರಣೆ ವ್ಯವಸ್ಥೆ ಬಹಳಷ್ಟು ಉತ್ತಮವಾಗಿದೆ. ಇದರಿಂದಾಗಿ ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲೂ ನಾಗರಿಕರಿಗೆ ಅಗತ್ಯ ಆಹಾರ ಧಾನ್ಯಗಳನ್ನು ಸರಿಯಾದ ಸಮಯಕ್ಕೆ ತಲುಪಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.