ಡೆಹರಾಡೂನ್, ಏ 13 (Daijiworld News/MSP): ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಆದರೂ ಕೆಲವರು ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗಿಳಿದವರಿಗೆ ಪೊಲೀಸರು ಬಿನ್ನ ವಿಭಿನ್ನ ಅಸ್ತ್ರ ಪ್ರಯೋಗಿಸುತ್ತಿದ್ದಾರೆ.
ಭಾನುವಾರ ಉತ್ತರಾಖಂಡದ ಹೃಷಿಕೇಶದಲ್ಲಿ ಲಾಕ್ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ವಿದೇಶಿ ಪ್ರಜೆಗಳ ಗುಂಪಿಗೆ ಪೊಲೀಸರು ವಿಭಿನ್ನ ರೀತಿ ಶಿಕ್ಷೆ ನೀಡಿದ್ದಾರೆ.
ವರದಿಗಳ ಪ್ರಕಾರ, ಕೊರೊನಾವೈರಸ್ ಹರಡುವುದನ್ನು ತಡೆಗಟ್ಟಲು ವಿಧಿಸಲಾಗಿರುವ ಲಾಕ್ ಡೌನ್ ಮಧ್ಯೆ ವಿವಿಧ ದೇಶಗಳಿಂದ ಬಂದ ಹತ್ತು ವಿದೇಶಿಯರು ಹೃಷಿಕೇಶದ ಗಂಗಾ ನದಿಯ ದಡದಲ್ಲಿ ತಪೋವನ ಪ್ರದೇಶದಲ್ಲಿ ಅಡ್ಡಾಡುತ್ತಿದ್ದರು. ಇದಕ್ಕಾಗಿ ಭಾರತದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ವಿದೇಶಿ ಪ್ರಜೆಯಿಂದ 'I Didn't Follow Lockdown Rules, I Am Sorry' ಎಂದು 500 ಬಾರಿ ಬರೆಸುವ ಮೂಲಕ ವಿಭಿನ್ನ ಶಿಕ್ಷೆಯನ್ನು ನೀಡಿದ್ದಾರೆ.
ವಿದೇಶಿಗರು ಲಾಕ್ಡೌನ್ ಮಾನದಂಡಗಳನ್ನು ಪಾಲಿಸಲ್ಲ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಗುಂಪಾಗಿ ತಿರುಗಾಡಿದ್ದಕ್ಕಾಗಿ ಅವರಿಗೆ ಬುದ್ದಿ ಹೇಳಿ ಕ್ಷಮಿಸಿ ಎಂದು ಬರೆಸಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ವಿನೋದ್ ಕುಮಾರ್ ಶರ್ಮಾ ಹೇಳಿದ್ದಾರೆ.