ನವದೆಹಲಿ, ಏ 13 (Daijiworld News/MSP): ಪ್ರಧಾನಿ ನರೇಂದ್ರ ಮೋದಿ ಏ.14 ರ ಬೆಳಗ್ಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಾಳೆಗೆ ಲಾಕ್ ಡೌನ್ ಮುಗಿಯುವ ಹಿನ್ನಲೆಯಲ್ಲಿ ಮುಂದೇನು ಎನ್ನುವ ಪ್ರಶ್ನೆ ದೇಶದ ಜನತೆಯನ್ನು ಕಾಡುತ್ತಿತ್ತು. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಳೆ ಮಾಡಲಿರುವ ಬಾಷಣ ಮಹತ್ವ ಪಡೆದಿದೆ.
ಇದಲ್ಲದೆ ಕೊರೊನಾ ವಿರುದ್ದದ ಮುಂದಿನ ಕಾರ್ಯತಂತ್ರ ಹೇಗಿರಬೇಕು? ರಾಜ್ಯಗಳು ಸಂಪೂರ್ಣ ನಿಯಂತ್ರಣ ಪಡೆದುಕೊಂಡು ಕೊರೊನಾ ವಿರುದ್ದ ಹೋರಾಡಬೇಕು ಎಂಬಿತ್ಯಾದಿ ವಿಚಾರಗಳ ಬಗ್ಗೆ ಭಾಷಣದಲ್ಲಿ ಉಲ್ಲೇಖಿಸುವ ಸಾಧ್ಯತೆ ಇದೆ.
ಈಗಾಗಲೇ ಕೊರೊನಗೆ ಸಂಬಂಧಪಟ್ಟಂತೆ ದೇಶವನ್ನು ಮೂರು ಹಂತದ ವಲಯಗಳನ್ನಾಗಿ ವಿಂಗಡನೆ ಮಾಡಿದ್ದು, ರೆಡ್ ಜೋನ್ ಅಲ್ಲದಿರುವ ಕೆಲವೊಂದು ಪ್ರದೇಶಗಳಲ್ಲಿ ಲಾಕ್ ಡೌನ್ ವೇಳೆ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ. ಇದಲ್ಲದೆ ಲಾಕ್ ಡೌನ್ ನಿಂದ ಈಗಾಗಲೇ ಕೃಷಿ , ಕೈಗಾರಿಕೆ ಸೇರಿದಂತೆ ಕೆಲ ವಲಯಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಒಂದುವೇಳೆ ಲಾಕ್ ಡೌನ್ ಮುಂದುವರಿದರೆ ಈ ಕ್ಷೇತ್ರಗಳಲ್ಲಿ ಕೆಲ ಷರತ್ತುಗಳೊಂದಿಗೆ ವಿನಾಯಿತಿ ನೀಡುವ ಸಾಧ್ಯತೆ ಇದೆ