ಮಹಾರಾಷ್ಟ್ರ, ಎ.13 (DaijiworldNews/PY) : ಮಹಾರಾಷ್ಟ್ರದ ಪಾಲ್ವಾರ್ನ ತಾರಾಪುರದ ರಾಸಾಯನಿಕ ಕಾರ್ಖಾನೆಯಲ್ಲಿ ಸೋಮವಾರ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಓರ್ವ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಪೋಟ ಸಂಭವಿಸಿದ ಸಂದರ್ಭ ತಾರಾಪುರ ರಾಸಾಯನಿಕ ವಲಯದ ಸೋಪ್, ಡಿಟರ್ಜೆಂಟ್ ಹಾಗೂ ಸ್ಯಾನಿಟೈಸರ್ ತಯಾರಿಕಾ ಘಟಕದಲ್ಲಿ ಸುಮಾರು 105 ಕಾರ್ಮಿಕರು ಹಾಗೂ ಆಡಳಿತ ಅಧಿಕಾರಿಗಳು ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲಾಕ್ಡೌನ್ ಸಂದರ್ಭ ಅಗತ್ಯ ಸೇವಾ ಘಟಕಗಳನ್ನು ಕೆಲಸ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದ್ದ ಕಾರಣ ಕಾರ್ಖಾನೆ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ.
ತಾರಾಪುರ ರಾಸಾಯನಿಕ ವಲಯದ ರಾಸಾಯನಿಕ ಕಾರ್ಖಾನೆಯಲ್ಲಿ ಈ ವರ್ಷದ ಜನವರಿಯಲ್ಲಿ ನಡೆದ ಸ್ಪೋಟದಲ್ಲಿ ಆರು ಜನ ಮೃತಪಟ್ಟಿದ್ದರು.