ಬೆಂಗಳೂರು, ಎ.14 (Daijiworld News/MB) : ಕೊರೊನಾ ನಿಯಂತ್ರಣಕ್ಕಾಗಿ ಎಪ್ರಿಲ್ 14 ರವರೆಗೆ ದೇಶದಾದ್ಯಂತ ಮಾಡಲಾಗಿದ್ದ ಲಾಕ್ಡೌನ್ನ್ನು ರಾಜ್ಯದಲ್ಲಿ ಎ.30 ರವರೆಗೆ ವಿಸ್ತರಿಸಲಾಗಿದ್ದು ಈ ಕಾರಣದಿಂದಾಗಿ ಹೈಕೋರ್ಟ್ ಸಹಿತ ರಾಜ್ಯದ ಎಲ್ಲಾ ವಿಚಾರಣಾ ಹಾಗೂ ಜಿಲ್ಲಾ ನ್ಯಾಯಾಲಯಗಳಿಗೆ ರಜೆಯನ್ನು ವಿಸ್ತರಣೆ ಮಾಡಲಾಗಿದೆ.
ಹೈಕೋರ್ಟ್ನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ, ಧಾರವಾಡ ನ್ಯಾಯಪೀಠಗಳು ಸಹಿತ ಎಲ್ಲ ವಿಚಾರಣಾ, ಜಿಲ್ಲಾ, ಕೌಟುಂಬಿಕ, ಕಾರ್ಮಿಕ ನ್ಯಾಯಾಲಯಗಳು ಮತ್ತು ಕೈಗಾರಿಕಾ ನ್ಯಾಯಾಧೀಕರಣಗಳಿಗೆ ರಜೆ ಇರಲಿದೆ.
ಆದರೆ ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಮಾತ್ರ ಎ. 16, 21, 24, 28ಕ್ಕೆ ಹೈಕೋರ್ಟ್ ನ್ಯಾಯಪೀಠಗಳು ಕಲಾಪ ನಡೆಸಲಿದ್ದು ಜಿಲ್ಲಾ ನ್ಯಾಯಾಲಯಗಳಿಗೂ ತುರ್ತು ಪ್ರಕರಣವಿದ್ದಲ್ಲಿ ವಕೀಲರು, ಪಾರ್ಟಿ ಇನ್ ಪರ್ಸನ್ಸ್ ಇ-ಮೇಲ್ಮೂಲಕ ವಿಚಾರಣೆಗೆ ಮನವಿ ಮಾಡಬಹುದು ಎಂದು ತಿಳಿಸಲಾಗಿದೆ.