ನವದೆಹಲಿ, ಎ.14 (Daijiworld News/MB) : ವಿಶ್ವದಾದ್ಯಂತ ಕೊರೊನಾ ವ್ಯಾಪಕವಾಗಿ ಹರಡಿರುವ ಈ ಸಂದರ್ಭದಲ್ಲಿ ಲಾಕ್ಡೌನ್ಗೆ ಆದೇಶ ನೀಡದಿದ್ದಲ್ಲಿ, ದೆಹಲಿಯಲ್ಲಿ ಕನಿಷ್ಠ 50 ಸಾವಿರದಿಂದ ಒಂದು ಲಕ್ಷದಷ್ಟು ಜನರಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿತ್ತು ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ.
ಪಿಪಿಇ ಕಿಟ್ಗಳ ಕೊರತೆಯ ಕುರಿತಾಗಿ ಮಾತನಾಡಿದ ಅವರು, ಸದ್ಯ ನಮ್ಮಲ್ಲಿ 13,500 ಪಿಪಿಇ ಕಿಟ್ಗಳಿವೆ. 2 ಲಕ್ಷ ಕಿಟ್ಗಳು ಬೇಕೆಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೇವೆ. ಹಾಗೆಯೇ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 1.4 ಲಕ್ಷ ಕಿಟ್ ಖರೀದಿ ಮಾಡಲು ನಿರ್ಧಾರ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ದೆಹಲಿಯಲ್ಲಿ ಈವರೆಗೆ 12 ಸಾವಿರ ಜನರ ಕೊರೊನಾ ಪರೀಕ್ಷೆ ಮಾಡಲಾಗಿದ್ದು ಪ್ರಕರಣಗಳು ಒಂದು ಸಾವಿರದ ಗಡಿ ದಾಟಿದೆ. 24 ಮಂದಿ ಸಾವನ್ನಪ್ಪಿದ್ದು ಇನ್ನೂ 10 ಸಾವಿರ ಜನರ ಪರೀಕ್ಷೆ ನಡೆಸಲು ಸರ್ಕಾರ ಮುಂದಾಗಿದೆ.