ನವದೆಹಲಿ, ಏ 14 (Daijiworld News/MSP):" ಕೈಗಳಲ್ಲಿ ನಮಸ್ತೆ ಮುದ್ರೆ, ಸಾಂಪ್ರದಾಯಿಕ 'ಗಮ್ಚಾ'ದಿಂದ (ತೆಳುವಾದ ಹತ್ತು ಬಟ್ಟೆಯ ಶಾಲು) ಮುಚ್ಚಿದ ಬಾಯಿ ಮತ್ತು ಮೂಗು " ಇದು ಪ್ರಧಾನಿ ನರೇಂದ್ರ ಮೋದಿಯವರ ಹೊಸ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಚಿತ್ರ. ಇಂದು ದೇಶವನ್ನುದ್ದೇಶಿ ಮಾತನಾಡಿದ ಬಳಿಕ ಪ್ರಧಾನಿ ನರೆಂದ್ರ ಮೋದಿ ಅವರ ಸಾಮಾಜಿಕ ಜಾಲತಾಣಗಳ ಪ್ರೋಪೈಲ್ ಚಿತ್ರ ಕೆಲವೇ ನಿಮಿಷಗಳಲ್ಲಿ ಬದಲಾಯಿಸಿದರು’ ಕೋವಿಡ್ -19 ಹರಡುವಿಕೆಯನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಕೋನದಿಂದ ಈ ಚಿತ್ರ ಬದಲಾಯಿಸಲಾಗಿದೆ ಎಂದು ತಿಳಿದುಬಂದಿದೆ.
ಕೊರೊನಾ ಆತಂಕದ ಸಮಯದಲ್ಲಿ ಸುರಕ್ಷಿತವಾಗಿರಲು ಮನೆಯಲ್ಲಿಯೇ ತಯಾರಿಸಿದ ಮಾಸ್ಕ್ ಗಳಿಂದ ಮುಖಗಳನ್ನು ಮುಚ್ಚಿ ಕೊರೊನಾ ವಿರುದ್ದ ಹೋರಾಡುವ, ಜಾಗೃತಿ ಮೂಡಿಸುವ ಗುರಿಯನ್ನು ಪ್ರಧಾನಿಗಳ ಪ್ರೋಪೈಲ್ ಚಿತ್ರ ಹೊಂದಿದೆ. ಪ್ರಧಾನಿಯವರ ಫೇಸ್ಬುಕ್ ಮತ್ತು ಟ್ವಿಟರ್ ಎರಡರಲ್ಲೂ ಶಲ್ಯವೇ ಮಾಸ್ಕ್ ನಂತೆ ಧರಿಸಿರುವ ಫೋಟೋವನ್ನು ಬಳಸಿದ್ದಾರೆ. ಈ ಹಿಂದೆ, ಶನಿವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗಿನ ಸಂವಾದದಲ್ಲಿ, ಕೊರೊನಾವೈರಸ್ ವಿರುದ್ಧ ಮುನ್ನೆಚ್ಚರಿಕೆ ಕ್ರಮವಾಗಿ ಅವರು ಮಾಸ್ಕ್ ಧರಿಸಿದ್ದರು.
ಇಂದಿನ ತಮ್ಮ ಭಾಷಣದ ಸಮಯದಲ್ಲಿ, ಮೇ. ೩ ರ ವರೆಗೆ ಲಾಕ್ಡೌನ್ ವಿಸ್ತರಣೆಯನ್ನು ಮೋದಿ ಘೋಷಿಸಿದ್ದಾರೆ. ಲಾಕ್ ಡೌನ್ ಮಾರ್ಗಸೂಚಿಗಳನ್ನು ಅನುಸರಿಸಿದ್ದಕ್ಕಾಗಿ ಮತ್ತು ಆಯಾ ಮನೆಗಳಲ್ಲಿ ಹಬ್ಬಗಳನ್ನು "ಸರಳತೆ" ಯೊಂದಿಗೆ ಆಚರಿಸಿದ್ದಕ್ಕಾಗಿ ಮೋದಿ ದೇಶದ ಜನರನ್ನು ಇದೇ ವೇಳೆ ಶ್ಲಾಘಿಸಿ "ಪ್ರೇರಕ ಮತ್ತು ಪ್ರಶಂಸನೀಯ" ಆಗಿದೆ ಎಂದು ಹೇಳಿ ಹುರಿದುಂಬಿಸಿದ್ದಾರೆ.
ಇದೇ ವೇಳೆ ದೇಶವಾಸಿಗಳ ತ್ಯಾಗದಿಂದಾಗಿ ದೇಶವು ಕೊರೊನಾದಂತಹ ಸಾಂಕ್ರಮಿಕ ರೋಗದಿಂದ ಆಗಬಹುದಾದ ಸಾಕಷ್ಟು ಹಾನಿಯನ್ನು ತಪ್ಪಿಸಲು ಸಮರ್ಥವಾಗಿದೆ. ಭಾರತದ ಹೋರಾಟವು "ಬಲವಾಗಿ" ಮುಂದುವರಿಯುತ್ತಿದೆ ಅವರು ಒತ್ತಿಹೇಳಿದ್ದಾರೆ.