ನವದೆಹಲಿ, ಎ.14 (Daijiworld News/MB) : ಕೊರೊನಾ ನಿಯಂತ್ರಣಕ್ಕಾಗಿ ಪ್ರಧಾನಿ ಮೋದಿ ಲಾಕ್ಡೌನ್ನ್ನು ವಿಸ್ತರಣೆ ಮಾಡಿದ್ದು ಪ್ರಯಾಣಿಕ ರೈಲು ಹಾಗೂ ವಿಮಾನಗಳ ಸಂಚಾರವನ್ನೂ ಮೇ ಮೂರರವರೆಗೆ ರದ್ದು ಮಾಡಲಾಗಿದೆ.
ಈ ಕುರಿತಾಗಿ ಟ್ವೀಟ್ ಮೂಲಕ ಮಾಹಿತಿ ನೀಡಿರುವ ರೈಲ್ವೇ ಸಚಿವಾಲಯ, ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಮೇ ಮೂರರವರೆಗೆ ಎಲ್ಲ ಪ್ರಾದೇಶಿಕ ಹಾಗೂ ಅಂತರರಾಷ್ಟ್ರೀಯ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ. ಪ್ರೀಮಿಯಂ ರೈಲುಗಳು, ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳು, ಉಪನಗರ ರೈಲುಗಳು, ಕೋಲ್ಕತ್ತಾ ಮೆಟ್ರೋ ರೈಲು, ಕೊಂಕಣ ರೈಲ್ವೆ, ಸೇರಿದಂತೆ ಎಲ್ಲಾ ಪ್ರಯಾಣಿಕ ರೈಲು ಸೇವೆಗಳು ಮೇ ಮೂರರವರೆಗೆ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ.
ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲೆಂದು ದೇಶದ ವಿವಿಧ ಭಾಗಗಳಿಗೆ ಸರಕು ಮತ್ತು ಸಾಗಣಿಕೆಗಳಿಗೆ ಗೂಡ್ಸ್ ರೈಲುಗಳು ಕಾರ್ಯಾಚರಣೆ ಮುಂದುವರೆಸಲಿದೆ. 3 ರವರೆಗೂ ರೈಲ್ವೇ ಬುಕ್ಕಿಂಗ್ನ ಎಲ್ಲಾ ಕೌಂಟರ್ಗಳು ಮುಚ್ಚಿರುತ್ತದೆ ಎಂದು ತಿಳಿಸಿದೆ.
ಇನ್ನು ಕೆಲವು ವಿಮಾನಯಾನ ಸಂಸ್ಥೆಗಳು ಸಿಬ್ಬಂದಿಗಳ ವೇತನವನ್ನು ಕಡಿತಗೊಳಿಸಿದ್ದು ಇನ್ನೂ ಕೆಲವು ಸಂಸ್ಥೆಗಳು ವೇತನ ರಹಿತ ಕಡ್ಡಾಯ ರಜೆ ಘೋಷಣೆ ಮಾಡಿದೆ. ಹಾಗೆಯೇ ಈ ಹಿಂದೆ ಮಾಡಲಾಗಿರುವ ಎಲ್ಲಾ ಟಿಕೆಟ್ ಬುಕ್ಕಿಂಗ್ಗಳನ್ನು ರದ್ದು ಮಾಡಲಾಗಿದೆ. ಸರಕು ಸಾಗಾಣೆ ವಿಮಾನಗಳು, ಹೆಲಿಕಾಫ್ಟರ್ಗಳು ಹಾಗೂ ವೈದ್ಯಕೀಯ ತುರ್ತು ಸೇವೆಗಳಿಗಾಗಿ ಮಾತ್ರ ವಿಮಾನ ಸಂಚಾರ ಮಾಡಲು ಅವಕಾಶ ನೀಡಲಾಗಿದೆ ಎಂದು ಡಿಜಿಸಿಎ ಹೇಳಿದೆ.